ಶೀಲ ಶಂಕಿಸಿ..ಪತ್ನಿಯ ಕೊಲೆ..?

0
1219

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಶೀಲ ಶಂಕಿಸಿದ ಪತಿ ತನ್ನ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಆಕೆಯ ಎರಡು ಕಿವಿಯನ್ನು ಕತ್ತರಿಸಿಕೊಂಡು ಮೃತದೇಹಕ್ಕೆ ಬೆಂಕಿ ಹಚ್ಚಿ, ಪೊಲೀಸ್ ಠಾಣೆಗೆ ಆಗಮಿಸಿರೋ ಭಯಾನಕ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಆದಿನಾರಾಯಣಪ್ಪ ಎಂಬಾತ ಪತ್ನಿ ವೆಂಕಟಲಕ್ಷಮ್ಮ ಎಂಬಾಕೆಯನ್ನು ಕೊಲೆ ಮಾಡಿದ್ದಾನೆ. ಅಂದಹಾಗೆ ಪತ್ನಿಯ ಶೀಲವನ್ನ ಶಂಕಿಸಿದ ಪತಿ ಆದಿನಾರಾಯಣ ಪ್ಲಾನ್ ಮಾಡಿ ಇಂದು ಬೆಳಿಗ್ಗೆ ಆಕೆಯನ್ನ ಗ್ರಾಮದ ಹೊರವಲಯದ ತನ್ನ ಜಮೀನು ಬಳಿ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ.ಮೊದಲು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನಂತರ ಆಕೆಯ ಎರಡು ಕಿವಿಯನ್ನ ಕಟ್ ಮಾಡಿಕೊಂಡು ಜೇಬನಲ್ಲಿಟ್ಟಿಕೊಂಡಿದ್ದಾನೆ. ತದ ನಂತರ ಅಲ್ಲೇ ಇದ್ದ ಸೌದೆಗೆ ಮೃತದೇಹ ಹಾಕಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ಬೈಟ್ : ನರಸಿಂಹಪ್ಪ, ಮೃತಳ ತಂದೆ

ಇನ್ನೂ ಮೃತಳಿಗೆ ಮದುವೆಯಾದಗಿನಿಂದಲು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಪತಿ ಆದಿನಾರಯಣ ನ ಕಿರುಕಳಕ್ಕೆ ಬೇಸತ್ತ ಪತ್ನಿ ವೆಂಕಟಲಕ್ಷ್ಮೀ ತವರುಮನೆಗೆ ಬಂದು ಸಾಕಷ್ಟು ಬಾರಿ ಹಣ ಒಡವೆಗಳನ್ನು ಪಡೆದು ಗಂಡನ ಮನೆಗೆ ಹೋಗುತ್ತಿದ್ದಳು.ಈ ನಡುವೆ ಇದೇ ವಿಚಾರವಾಗಿ ಗಲಾಟೆಗಳು ನಡೆದಿದ್ದು ಆದಿನಾರಯಣನ ವಿರುದ್ದ ಪ್ರಕರಣಗಳು ದಾಖಲಾಗಿವೆ

ಬೈಟ್ : , ಮೃತಳ ತಂದೆ

ಇಷ್ಟೆಲ್ಲ ಭೀಕರ ಕೃತ್ಯ ನಡೆಸಿದ ಆದಿನಾರಾಯಣ ಕೊನೆಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆದಿನಾರಾಯಣನ ಮಾತು ಕೇಳಿ ಬೆಚ್ಚಿ ಬಿದ್ದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡುವಷ್ಟರಲ್ಲಿ ಮೃತದೇಹ ಶೇ. 90ರಷ್ಟು ಸುಟ್ಟು ಕರಕಲಾಗಿತ್ತು. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂತು ಹರಿಸ್ಕೊಂಡು ಹೋಗ ವಿಷಯಕ್ಕೆ ಹೆಂಡತಿಯ ಜೀವವನ್ನೇ ತೆಗೆದ್ದಿದ್ದಾನೆ.ಪಾಪಿ ಪತಿ ಹುಚ್ಚಾಟಕ್ಕೆ ಎರಡು ಮಕ್ಕಳು ತಪ್ಪಿಲಿಯಾದ್ರು ಇತ್ತಾ ಆದಿನಾರಾಯಣ ಕ್ಷಣದ ಕೋಪದಿಂದ ಜೈಲು ಸೇರಿದ್ದಾನೆ.

LEAVE A REPLY

Please enter your comment!
Please enter your name here