ಶುದ್ದನೀರಿನ ಘಟಕ ಉದ್ಘಾಟನೆ

0
131

ಮಂಡ್ಯ/ಮಳವಳ್ಳಿ: ಅಧಿಕಾರಿಯೊಬ್ಬರನ್ನು ಸಮಾರಂಭದಲ್ಲಿ ಶಾಸಕ ಡಾ.ಕೆ ಅನ್ನದಾನಿ ರವರು ರಾಜಕಾರಣಿ ಮಾತನಾಡಲು ರೀತಿ ಮಾಡುವ ಮೂಲಕ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ ಬನ್ನಿ ಯಾವ ರೀತಿ ಮಾತನಾಡಿದ್ದಾರೆ ನೋಡೋಣ.
ಮಳವಳ್ಳಿ ಪಟ್ಟಣದ. ಪುರಸಭೆ ವತಿಯಿಂದ 2 ನೇ ವಾರ್ಡುನಲ್ಲಿ ಶುದ್ದನೀರಿನ ಘಟಕವನ್ನು ಉದ್ಘಾಟಿಸಿ ನಂತರ ಸಮಾರಂಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್ .ಟಿ ಮಂಜುನಾಥ ರವರನ್ನು ಅವರ ದಾಟಿಯಲ್ಲೇ ಹೊಗಳುವ ಜೊತೆಗೆ ಪರೋಕ್ಷವಾಗಿ ಅವಮಾನ ಮಾಡಿದ್ದು, ಜೊತೆಗೆ ಶಾಸಕರಿಗೂ ಅಧಿಕಾರಿಗೂ ಸೀಕ್ರೆಟ್ ಇರುತ್ತದೆ. ಅದನ್ನು ಕೇಳಬೇಡಿ, ಸೀಕ್ರೆಟ್ಸ್ ಎಂದರೆ ಲಂಚವಲ್ಲ, ಶಾಸಕಾಂಗ ಕಾರ್ಯಾಂಗ ಕ್ಕೂ ನಿಕಟ ಸಂರ್ಪಕವಿದೆ ಶಾಸಕರು ಹೇಳಿದ ಕೆಲಸವನ್ನು ಅಧಿಕಾರಗಳು ಮಾಡುವುದು ಅವರ ಕರ್ತವ್ಯ. ಒಂದುವೇಳೆ ಅಧಿಕಾರಗಳು ಸರಿಯಾಗಿ ಕೆಲಸ ಮಾಡದ್ದಿದ್ದರೆ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಸಾರ್ವಜನಿಕ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಮಾರಂಭದಲ್ಲೇ ಸಾರ್ವಜನಿಕ ಎದುರಿನಲ್ಲೆ ಎಚ್ಚರಿಸಿದರು. ಹಿಂದೆ ಇದ್ದ ಶಾಸಕರು ಹೇಳಿದ ರೀತಿ ಕೆಲಸ ಮಾಡಿದ್ದೀರಿ ಯಾರು ಶಾಸಕರಾಗುತ್ತಾರೆ ಅವರು ಹೇಳಿದ ಹಾಗೆ ಕೇಳುವುದು ಅಧಿಕಾರ ಕೆಲಸ ಆದರೆ ಸಾರ್ವಜನಿಕ ಅನ್ಯಾಯವಾಗುವ .ವಿರುದ್ದವಾದ ಕೆಲಸ ಮಾಡಬೇಡಿ. ನ್ಯಾಯವಾಗಿ ಕೆಲಸ ನಿರ್ವಹಿಸಿ ಇಲ್ಲದಿದ್ದರೆ ಬೇರೆ ಕಡೆ ಗೆ ಹೋಗಿ ಎಂದು ಎಚ್ಚರಿಸಿದ್ದರು. ಜನರಿಗೆ ಊಟ ಇಲ್ಲದಿದ್ದರೂ ನೀರು ಮುಖ್ಯ,ಅದಕ್ಕಾಗಿ ಕೇವಲ 2 ರೂ ಗೆ 20 ಲೀಟರ್ ಶುದ್ದನೀರು ನೀಡಲಾಗುವುದು ಇದನ್ನು ಸದುಪಯೋಗಪಡಿಸುಕೊಳ್ಳುವಂತೆ ಕರೆನೀಡಿದರು. ಇದೇ ಸಂದರ್ಭದಲ್ಲಿ ವಾರ್ಡುನ ಸಾರ್ವಜನಿಕ ರಿಗೆ ಉಚಿತ ಕ್ಯಾನ್ ನೊಂದಿಗೆ ನೀರು ನೀಡಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್.ಟಿ ಮಂಜುನಾಥ, ಪುರಸಭೆ ಸದಸ್ಯೆ ನಂದಿನಿಆನಂದ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರೇಮಕಿಟ್ಟಿ, ಪುರಸಭೆ ಸದಸ್ಯರಾದ ರಮೇಶ್, ಚಿಕ್ಕರಾಜು, ಮಾಜಿಪುರಸಭಾಧ್ಯಕ್ಷ ಕೆಂಪಯ್ಯ, ದೊಡ್ಡಯ್ಯ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here