ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

0
91

ಬೆಂಗಳೂರು/ಮಹದೇವಪುರ:- ಸಾರ್ವಜನಿಕರಿಗೆ ಉಪಯೋಗವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ಪಾಲಿಕೆ ಸದಸ್ಯ ಹಾಗೂ ಸಮಾಜಸೇವಕ ಎಂ.ಬಿ.ಸಿ ಪಿಳ್ಳಪ್ಪ ಉದ್ಘಾಟಿಸಿದರು.
ಮಹದೇವಪುರ ಕ್ಷೇತ್ರದ ಗರುಡಚಾರ್ ಪಾಳ್ಯದ ಆರ್.ಎಚ್‌.ಬಿ ಬಡಾವಣೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸಾರ್ವಜನಿಕರಿಗೆ ಉಪಯೋಗವಾಗುಬೇಕೆಂಬ ನಿಟ್ಟಿನಲ್ಲಿ, ಆರೋಗ್ಯಕಾರ ನೀರನ್ನು ಕುಡಿಯಲು,
ಉತ್ತಮ ಆರೋಗ್ಯ ಕಾಪಾಡುಲು ಇಂದು ಸ್ವತಃ ಹಣದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕದಲ್ಲಿ ಕೇವಲ 5 ರೂಪಾಯಿ ವೆಚ್ಚದಲ್ಲಿ 20 ಲೀಟರ್ ನೀರನ್ನು ನೀಡುವ ಕೇಂದ್ರವನ್ನು ಪ್ರಾರಂಭಿಸಿಲಾಗಿದೆ ಇದನ್ನು ಸಾರ್ವಜನಿಕರು ಉಪಯೋಗಿಸಬೇಕು, ಈ ಘಟಕವನ್ನು ಸರ್ಕಾರಿ ಅನುಮತಿ ಪಡೆಯಲ್ಲಾಗಿದೆ ಎಂದು ತಿಳಿಸಿದರು‌‌.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ನೀರಿನ ಕ್ಯಾನ್’ಗಳನ್ನು ವಿತರಣೆ ಮಾಡಲಾಯಿತು.
ಇದೇ ವೇಳೆ ಸ್ಥಳೀಯ ಮುಖಂಡರಾದ ಅನಂತರಾಮಯ್ಯ,ಚಿಕ್ಕಣ್ಣ,ಚಂದ್ರಶೇಖರ್, ಮಂಜು, ಮೋಹನ್,ನಂದ ಕುಮಾರ್, ಆರ್.ಎ.ಪಿ ಮಂಜು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here