ಶುದ್ಧ ನೀರು ಘಟಕ ಪ್ರಾರಂಭೋತ್ಸವ

0
160
Nammuru T V Online News Channel
WATERNammuru T V Online News Channel

 ಶ್ರೀನಿವಾಸಪುರ: ನೀರಿನಲ್ಲಿ ಹೆಚ್ಚಿನ ಪ್ಲೋರೈಡ್ ಅಂಶವು ಇದ್ದು ಮನುಷ್ಯನ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ತಂದು ರೋಗ ಪೀಡಿತನನ್ನಾಗಿ ಮಾಡುತ್ತಿದೆ. ಆದ್ದರಿಂದ ಹೆಚ್ಚು ಪ್ಲೋರೈಡ್ ಅಂಶ ಪತ್ತೆಯಾಗಿರುವ ಸ್ಥಳಗಳಲ್ಲಿ ಶುದ್ಧ ನೀರು ಘಟಕಗಳನ್ನು ಸ್ಥಾಪಿಸಲಾಗುತ್ತಿದೆಯೆಂದು ಪುರಸಭೆ ಅಧ್ಯಕ್ಷೆ ಅರುಣಾ ಜಗದೀಶ್ ಪಟ್ಟಣದ ಕೊಳ್ಳೂರು ಹೊಸ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಶುದ್ಧ ನೀರು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.WATER
ಈ ಸಂಧರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ಮನುಷ್ಯ ಆರೋಗ್ಯವಾಗಿ ಬದುಕಲು ಆಹಾರ, ಗಾಳಿ, ನೀರು ಎಷ್ಟು ಮುಖ್ಯವೆಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಆ ಕುಡಿಯವ ನೀರು ಕಲ್ಮಷಪೂರಿತ ಮತ್ತು ವಿಷಕಾರಿಯಾಗಿದ್ದರೆ ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ನಶಿಸಿ ರೋಗ ರುಜಿನಗಳಿಂದ ಕೂಡಿದ ದೇಹದೊಂದಿಗೆ ಕೃಷವಾಗುವಂತಹ ಸ್ಥಿತಿಯನ್ನು ಕ್ಷೇತ್ರದ ಜನ ಅನುಭವಿಸಬಾರದೆಂದು ತಾಲ್ಲೂಕಿನಾಧ್ಯಂತ ಶುದ್ಧ ನೀರು ಘಟಕಗಳನ್ನು ಸ್ಥಾಪಿಸಲಾಗುತ್ತಿದೆಯೆಂದು ಸಚಿವ ಕೆ.ಆರ್.ರಮೇಶ್‍ಕುಮಾರ್ ಹೇಳಿದ್ದರು ಅದರಂತೆಯೇ ತಾಲ್ಲೂಕಿನಾಧ್ಯಂತ ಅದರಂತೆಯೇ ಘಟಕಗಳನ್ನು ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆಯೆಂದು ಹೇಳಿದರು.
ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್, ವ್ಯವಸ್ಥಾಪಕ ಸತ್ಯನಾರಾಯಣ, ಪುರಸಭೆ ಸದಸ್ಯರಾದ ಬಿ.ಎಂ.ಪ್ರಕಾಶ್, ಮುನಿರಾಜು, ಅಬ್ದುಲ್ ಸತ್ತಾರ್, ನಾಮನಿರ್ಧೇಶಿತ ಸದಸ್ಯರುಗಳಾದ ಜಯಣ್ಣ, ಡಾ||ವೆಂಕಟೇಶ್, ಮುಖಂಡರುಗಳಾದ ಕೆ.ಕೆ.ಮಂಜು, ಜಗದೀಶ್, ಯಮ್ಮನೂರು ನಾಗರಾಜ್ ಮತ್ತು ಗ್ರಾಮಸ್ಥರಾದ ಕೆ.ಎನ್.ಸತ್ಯನಾರಾಯಣರೆಡ್ಡಿ, ಕೆ.ಎನ್.ವೆಂಕಟೇಶ್, ಮೇಸ್ತ್ರೀ ವೆಂಕಟೇಶ್, ರಾಮಕೃಷ್ಣಪ್ಪ, ಶಿವ, ಸೋಮು, ರಾಮಣ್ಣ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here