ಶೈಕ್ಷಣಿಕ ಸಾಲಿನ ಉದ್ಘಾಟನೆ ಮತ್ತು ಸ್ವಾಗತ ಸಮಾರಂಭ..

0
127

ಮಂಡ್ಯ/ಮಳವಳ್ಳಿ: ಭಗವಾನ್ ಬುದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ಅಂಗಸಂಸ್ಥೆ ಯಾದ ಭಗವಾನ್ ಬುದ್ಧ ಶಿಕ್ಷಣ ‌(ಬಿಇಡಿ) ವತಿಯಿಂದ 2017- 18 ನೇ ಶೈಕ್ಷಣಿಕ ಸಾಲಿನ ಉದ್ಘಾಟನೆ ಮತ್ತು ಪ್ರಥಮ ಬಿಇಡ್ ವಿದ್ಯಾರ್ಥಿ ಗಳಿಗೆ ಸ್ವಾಗತ ಸಮಾರಂಭ ಮಳವಳ್ಳಿ ಪಟ್ಟಣದ ಭಗವಾನ್ ಬುದ್ಧ ಕಾಲೇಜು ಸಭಾಂಗಣದಲ್ಲಿ ನಡೆಸಲಾಯಿತು. ಕಾರ್ಯಕ್ರಮ ವನ್ನು ಮೈಸೂರು ಶಾರದ ಶಿಕ್ಷಣ ಮಹವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೋ. ಹೆಚ್.ಎಸ್ ಉದ್ಘಾಟಿಸಿದರು ನಂತರ ಮಾತನಾಡಿ. ಗುರುಗಳಾದ ನಾವು ಏನು ಕಲಿತ್ತಿಲ್ಲ.ಗುರು ಎಂದು ಮರೆಯಬೇಕು. ಆಗ ಎಲ್ಲವನ್ನು ಕಲಿಯುತ್ತಾನೆ. ಗುರು ಪರಂಪರೆಯನ್ನು ಪ್ರತಿಯೊಬ್ಬ ರು ತಿಳಿದುಕೊಳ್ಳಬೇಕು ಎಂದರು.‌ ಬುದ್ಧ ಗುಣವನ್ನು ಎಲ್ಲರೂ ಆಳವಡಿಕೊಳ್ಳುವಂತೆ ಕರೆ ನೀಡಿದರು. ಕಾಯಕ್ರಮದ ಅಧ್ಯಕ್ಷತೆಯನ್ನು ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಯ ಅಧ್ಯಕ್ಷ ಯಮದೂರುಸಿದ್ದರಾಜು ವಹಿಸಿ ಮಾತನಾಡಿ, ರಾಜಕಾರಣಿ, ಡಾಕ್ಟರ್, ಇಂಜನಿಯರ್ ಯಾಗಬೇಕಾದರೆ ಶಿಕ್ಷಕರ ಪಾತ್ರ ಮುಖ್ಯ. ಶಿಕ್ಷಕರಾಗಬೇಕಾದರೆ ಪತ್ರಿಯೊಂದು ವಿಷಯವನ್ನು ತಿಳಿದುಕೊಂಡಾಗ ಮಾತ್ರ ಸಾಧ್ಯ ಎಂದರು ಕಾರ್ಯಕ್ರಮ ದಲ್ಲಿ ಬುದ್ದ ವಿಹಾರದ ಮನೋರಬ್ಖಿತ ಭುತೇಜಿ, ಚೇತನಕುಮಾರ. ನರೇಂದ್ರಬಾಬು, ಪ್ರಾಂಶುಪಾಲ ಡಾ. ಎನ್ ಸುರೇಶ್ ಸೇರಿದಂತೆ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here