ಶೋಭಾ ಬಿ ಎಸ್ ವೈ ವಿರುದ್ದ ಪ್ರತಿಭಟನೆ…

0
62

ರಾಯಚೂರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಎಸ್ ಯಡಿಯೂರಪ್ಪನವರು ಕೋಮುಗಲಭೆಗೆ ಪ್ರಚೋದನೆ ನೀಡಿತ್ತಿದ್ದು ಅವರ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಶೋಭಾ ಕರಂದ್ಲಾಜೆ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರಹಾಕಿ ಪ್ರತಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಎರಡು ತಿಂಗಳನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣವಿದ್ದು ಇಬ್ಬರ ಅಮಾಯಕರ ಸಾವಿಗೆ ಕಸರಣರಾಗಿದ್ದಾರೆ.ಕಾನೂನು ಸುವ್ಯವಸ್ಥೆ ಕಾಪಾಡಲು ೧೪೪ ಜಾರಿಯಿದ್ದರೂ ನೂರಾರು ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಇದು ಖಂಡನಿಯವಾಗಿದೆ ಎಂದರು.

ಕೊಲೆ ಆರೋಪಿಗಳನ್ನು ಬಂದಿಸಿ ಅವರಿಗೆ ಶಿಕ್ಷೆ ಕೊಡಲು ಪೋಲಿಸ್ ಇಲಾಖೆ ಕೆಲಸದಲ್ಲಿದೆ ಮತ್ತು ಎಲ್ಲರ ಒತ್ತಾಯ ವಾಗಿದೆ ಆದರೂ ಸಹ ಪ್ರತಿಭಟನೆ ಸಭೆಯ ಮಾಡುವುದರ ಮೂಲಕ ಮತ್ತಷ್ಟು ವಾತಾವರಣ ವನ್ನು ಇಕ್ಕಟಿಗೆ ತರುತ್ತಿದ್ದಾರೆ ಎಂದರು.

ಪದೇ ಪದೇ ಯಡಿಯೂರಪ್ಪ ಮತ್ತು ಶೋಭಾ ಅವರು ಅಲ್ಲಿಗೆ ತೆರಳಿ ಆರ್ ಎಸ್ ಎಸ್ ಮತ್ತು ಹಿಂದು ಹಾಗೂ ಬಿಜೆಪಿ ಪರಿವಾರ ನಿರಂತರವಾಗಿ ರಾಜಕಾರಣ ಮಾಡುತ್ತಿದೆ.ಮತ್ತು ಕೋಮು ಪ್ರಚೊದನೆ ನೀಡುತ್ತಿದ್ದಾರೆ ಈ ಕೂಡಲೆ ಅವರ ಸಂಸದ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ಅಬ್ದುಲ್ ಮಸೀದ್,ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.

LEAVE A REPLY

Please enter your comment!
Please enter your name here