ಶೌಚಾಲಯಗಳಲ್ಲಿ ಮೊಬೈಲ್ ಕ್ಯಾಮರ

0
214

ಬೆಂಗಳೂರು/ಮಹದೇವಪುರ:- ಸಾಫ್ಟ್ವೇರ್ ಸಂಸ್ಥೆಯಲ್ಲಿನ ಶೌಚಾಲಯಗಳಲ್ಲಿ ಮೊಬೈಲ್ ಕ್ಯಾಮರ ಅಲವಡಿಸಿ ಮಹಿಳೆಯರ ವಿಡಿಯೋ ಚಿತ್ರೀ ಕರಿಸುತ್ತಿದ್ದ ಕಾಮುಕನೊಬ್ಬನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿ ಶ್ರೀಕೃಷ್ಣ ಜನ್ಮಸ್ಥಾನಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪರಮೇರ್ಶವರ್ (24) ಬಂಧಿತ ಕಾಮುಕ, ಮಂಗಳೂರು ಮೂಲದ ಪರಮೇರ್ಶವರ್ ನಗರದ ಕುಂದಲಹಳ್ಳಿಯಲ್ಲಿರುವ ಕಂನ್ಸೆಟ್ರಿಕ್ ಸಾಫ್ಟ್ವೇರ್ ಸಂಸ್ಥೆಯಲ್ಲಿ ಕ್ಯಾಂಟಿನ್ ನಲ್ಲಿ ಫುಡ್ ಸಪ್ಲೆ ಮಾಡುತ್ತಿದ್ದ, ಈತ ಸಂಸ್ಥೆಯಲ್ಲಿನ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರ ಅಲವಡಿಸುತ್ತಿದ್ದ, ಇದರಿಂದ ಚಿತ್ರಿತವಾದ ದೃಶ್ಯಗಳನ್ನು ನೋಡಿ ತನ್ನ ಕಾಮ ತೃಶೆ ತೀರಿಸಿಕೊಳ್ಳುತ್ತಿದ್ದ, ಈ ವಿಷಯ ಕಳೆದ ಮೂರ ರಂದು ಮಹಿಳಾ ಟೆಕ್ಕಿಯೊಬ್ಬರು ಪತ್ತೆಹಚ್ಚಿದ್ದು ಹೆಚ್ಎಎಲ್ ಪೊಲೀಸರಿಗೆ ದೂರು ನೀಡಿದ್ದರು, ಈ ವಿಷಯ ತಿಳಿದ ಕಾಮುಕ ತಲೆ ಮರೆಸಿಕೊಂಡಿದ್ದ ಇವನ ಜಾಡು ಹಿಡಿದ ಹೆಚ್ಎಎಲ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ನಾರಾಯಣ್ ತಿಳಿಸಿದ್ದಾರೆ.

ಬೈಟ್;ನಾರಾಯಣ್ ಡಿಸಿಪಿ ವೈಟ್ಫೀಲ್ಡ್ ವಿಭಾಗ.

LEAVE A REPLY

Please enter your comment!
Please enter your name here