ಶೌಚಾಲಯಗಳು ನಿರ್ಮಾಣಿಸಿ ಜಾಗೃತಿ

0
141

ಚಾಮರಾಜನಗರ/ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಗ್ರಾಮದ ಉಪ್ಪಾರ ಬಡಾವಣೆಯ ಗ್ರಾಮ ಪಂಚಾಯ್ತಿ ಸದಸ್ಯೆ ಯಶೋಧಮ್ಮ 200 ಶೌಚಾಲಯಗಳನ್ನು ನಿರ್ಮಿಸಿ ದಿಟ್ಟತನ ಮೆರೆದಿದ್ದಾರೆ. ಗ್ರಾಮದ ಮಹಿಳೆಯರು ಬಯಲು ಶೌಚಕ್ಕೆ ಹೋಗುವುದನ್ನು ತಪ್ಪಿಸುವ ತಮ್ಮ ಸ್ವಂತ ಹಣವನ್ನು ವಿನಿಯೋಗಿಸಿ 200 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರಿಂದ ಶೌಚಾಲಯ ಕಟ್ಟಿಸಿಕೊಂಡ ಫಲಾನುಭವಿಗಳು ಯಶೋಧಮ್ಮ ಅವರಿಗೆ ಕೃತಜ್ಞತೆಗಳನ್ನ ಸಲ್ಲಿಸ್ತಿದ್ದಾರೆ.

ಇನ್ನು ಈ ಬಗ್ಗೆ ವಿನಮ್ರವಾಗಿಯೇ ಪ್ರತಿಕ್ರಿಯಿಸೋ ಯಶೋಧಮ್ಮ, ಸ್ವಚ್ಚ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಾಣಕ್ಕೆ ಜಾಗೃತಿ ಮೂಡಿಸಲಾಯ್ತು. ಆದ್ರೆ ಹಿಂದುಳಿದ ಉಪ್ಪಾರ ಜನಾಂಗದವ್ರು ನಿತ್ಯ ಕೂಲಿ ಮಾಡಿ, ಜೀವನ ಸಾಗಿಸ್ತಿದ್ದು, ಹಣದ ಸಮಸ್ಯೆ ಎದುರಿಸ್ತಿದ್ರು. ಹೀಗಾಗಿ ನನ್ನ ಸ್ವಂತ ಹಣವನ್ನು ನೀಡಿ 200 ಶೌಚಾಲಯ ನಿರ್ಮಾಣಕ್ಕೆ ಸಹಕರಿಸಿದ್ದೇನೆ. ಗ್ರಾಮ ಪಂಚಾಯ್ತಿಯಿಂದ ಶೌಚಾಲಯ ನಿರ್ಮಾಣಕ್ಕಾಗಿ ಬರುವ ಅನುದಾನವನ್ನು ಪಡೆದು, ಅದನ್ನ ಗ್ರಾಮದ ಇನ್ನಷ್ಟು ಬಡವರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡ್ತೇನೆ ಎಂದು ಹೇಳ್ತಾರೆ.

ಅಲ್ಲದೆ ಯಶೋಧಮ್ಮ ಇದೇ ಮೊದಲ ಬಾರಿಗೆ ಗ್ರಾಪಂ ಸದಸ್ಯೆಯಾಗಿದ್ದು, ಅಧ್ಯಕ್ಷರಾಗಲು ಆಕಾಂಕ್ಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗುವ ಅವಕಾಶವೇನಾದ್ರೂ ಸಿಕ್ಕರೆ ಇಡೀ ಗ್ರಾಮವನ್ನು ಬಯಲು ಶೌಚ ಮುಕ್ತವನ್ನಾಗಿಸಿ, ಇಡೀ ರಾಜ್ಯಕ್ಕೆ ಮಾದರಿಯಾಗಿಸುವುದಾಗಿ ಹೇಳಿದರು.

LEAVE A REPLY

Please enter your comment!
Please enter your name here