ಶೌಚಾಲಯದ ಕೊರತೆ,ಜನಸಾಮಾನ್ಯರ ಪರದಾಟ

0
353

ಚಾಮರಾಜನಗರ/ ಕೊಳ್ಳೇಗಾಲ: ನಗರಸಭೆ ಆಗಿರುವ ಕೊಳ್ಳೇಗಾಲ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲದೆ ಜನರು ಪರಿತಪಿಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ‌.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನಲೆಯಲ್ಲಿ ರಸ್ತೆಗಳ ಅಗಲೀಕರಣದ ಕಾರಣ ಪಟ್ಟಣದ ಪ್ರದೇಶಗಳಲ್ಲಿದ್ದ ಸಾರ್ವಜನಿಕ ಶೌಚಾಲಯ ಗಳನ್ನು ತೆರವುಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಇದರ ಕಡೆ ಯಾರೂ ಸಹ ಗಮನ ಹರಿಸುತ್ತಿಲ್ಲ‌.

ನೂತನ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಅಲ್ಲಿನ ಶೌಚಾಲಯವನ್ನು ಸಹ ತೆರವುಗೊಳಿಸಲಾಗಿದ್ದು ಇಡೀ ಪಟ್ಟಣಕ್ಕೆ ಎಸ್.ಸಿ.ಕೆ.ಎಂ ರಸ್ತೆಯಲ್ಲಿರುವ ಒಂದೇ ಒಂದು ಶೌಚಾಲಯವಿದೆ‌. ಆದರೆ ಅಲ್ಲೂ ಸಹ ಆಗಾಗ ನೀರಿನ ಕೊರತೆ ಇದೆ. ಹೆಚ್ಚಿನ ಜನರು ಇದೊಂದೇ ಶೌಚಾಲಯಕ್ಕೆ ಅವಲಂಬಿತರಾಗಿರುವ ಕಾರಣ ಗಂಡಸರು ಹೆಂಗಸರ ಶೌಚಾಲಯ ಬಳಸುವಂತಹ ಪರಿಸ್ಥಿತಿಯೂ ಕಾಣುತ್ತಿದೆ‌. ಹಾಗಾಗಿ ಕೆಲವೊಮ್ಮೆ ಶೌಚಾಲಯ ಇದ್ದು ಇರದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಸ್ವಚ್ಛ ಭಾರತ್ ಯೋಜನೆಯಡಿ ಬಯಲು ಮುಕ್ತ ಶೌಚಾಲಯ ಮಾಡಲು ಸರ್ಕಾರಗಳು ನೂರಾರು ಕೋಟಿ ಅನುದಾನಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳುತ್ತವೆ. ಆದರೆ ರಾಜ್ಯ ಮಟ್ಟದಲ್ಲಿ ಹೆಸರು ವಾಸಿಯಾಗಿರುವ ಪಟ್ಟಣದಲ್ಲೇ ಶೌಚಾಲಯಗಳಿಲ್ಲದಿರುವುದು ಶೋಚನೀಯ. ಹಾಗಾಗಿ ನಗರಸಭೆ ಇತ್ತ ಗಮನ ಹರಿಸಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕೊಡಿಸಬೇಕಿದೆ.

LEAVE A REPLY

Please enter your comment!
Please enter your name here