ಶೌಚಾಲಯದ ಮುಂದೆಯೇ ಬೇಕರಿ ..!

0
210

ಬಳ್ಳಾರಿ /ಹೊಸಪೇಟೆ: ಶೌಚಾಲಯದ ಮುಂದೆಯೇ ಬೇಕರಿ – ಇದು ಹೊಸಪೇಟೆ ಬಸ್ ನಿಲ್ದಾಣದಲ್ಲಿ ಕಂಡು ಬಂದ ದೃಶ್ಯ- ಮಹಿಳಾ‌ ಮತ್ತು ಪುರುಷರ ಶೌಚ ಗೃಹದ ಮುಂಭಾಗದಲ್ಲೇ ರೊಟ್ಟಿ, ಬ್ರೆಡ್ಡು, ಹಣ್ಣು ಮಾರಾಟ -ಇದೊಂದು ಅಪರೂಪದ ಬೇಕರಿ – ನೀವೂ ಒಂದ್ಸಾರಿ ಇದನ್ನ ನೋಡಿ.

ಶೌಚಾಲಯದ ಮುಂಭಾಗದಲ್ಲಿಯೇ ಬೇಕರಿ ಇರೋದನ್ನ ನೀವು ಎಲ್ಲಿಯಾದರೂ ನೋಡಿದ್ದೀರಾ? ನೀವು ನೋಡಿರದಿದ್ದರೆ ನಾವು ತೋರ್ಸ್ತಾ ಇದೀವಿ ಈಗ ನೋಡಿ.

ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಸ್ ನಿಲ್ದಾಣದ ದೃಶ್ಯ. ಈ ಬಸ್ ನಿಲ್ದಾಣದಲ್ಲಿ ಮಹಿಳಾ ಶೌಚಾಲಯ ಮತ್ತು ಪುರುಷರ ಶೌಚಾಲಯ ಅಂತ ಅಕ್ಕ ಪಕ್ಕದಲ್ಲಿಯೇ ಎರಡು ಶೌಚ ಗೃಹಗಳನ್ನ ನಿರ್ಮಿಸಲಾಗಿದೆ.

ಪ್ರಯಾಣಿಕರ ದೇಹಬಾಧೆ ತಣಿಸಲು ಅತ್ಯಾಧುನಿಕ ಶೌಚಾಲಯ ನಿರ್ಮಿಸಿದ್ದೇನೋ ಸರಿ. ಆದ್ರೆ, ಈ ಜಂಟಿ ಶೌಚಾಲಯಗಳ ಎದುರಿಗೇ ತಿನ್ನುವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಇದು ಸರೀನಾ ಅಂತ ಜನ್ರ ಪ್ರಶ್ನೆಯಾಗಿದೆ.

ಇಲ್ಲಿ ವಾಣಿಜ್ಯ ಮಳಿಗೆ ಇದೆ. ಇದ್ರಲ್ಲಿ ಬೇಕರಿಯನ್ನ ತೆರೆಯಲಾಗಿದೆ. ಈ ಬೇಕರಿಯಲ್ಲಿ ಜೋಳದ‌ ಕಡಕ್ ರೊಟ್ಟಿಯೂ ಸೇರಿದಂತೆ ಬನ್ನು, ಬ್ರೆಡ್ಡು, ಬಿಸ್ಕೀಟ್ಟು ಮತ್ತು ಬಾಳೆಹಣ್ಣು ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ಮಾರಾಟ ಮಾಡಲಾಗುತ್ತಿದೆ.

ಈ ಜಂಟಿ ಶೌಚಾಲಯಗಳ ಮುಂಭಾಗದಲ್ಲಿಯೇ ಹಲವು ಬಗೆಯ ತಿನಿಸುಗಳನ್ನು ಮಾರಾಟ ಮಾಡುವ ಬೇಕರಿ ಇದ್ದು, ಮೂತ್ರ ಹಾಗೂ ಮಲ ವಿಸರ್ಜನೆ ಗೆ ತೆರಳುವವರಿಗೆ ಸಾಕಷ್ಟು ಅಚ್ಚರಿ ಮೂಡಿಸಿದೆ.

LEAVE A REPLY

Please enter your comment!
Please enter your name here