ಶ್ರದ್ಧಾ ಭಕ್ತಿಗಳಿಂದ ವೈಕುಂಠ ಏಕಾದಶಿ ಆಚರಣೆ..

0
195

ಬಳ್ಳಾರಿ/ಹೊಸಪೇಟೆ:ಮರಿಯಮ್ಮನಹಳ್ಳಿ : ವೈಕುಂಠ ಏಕಾದಶಿ ನಿಮಿತ್ತ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು . ಇದರ ಅಂಗವಾಗಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ , ಅಲಂಕಾರ , ತುಳಸಿ , ಹೂಗಳ ಅರ್ಚನೆಗಳು ನಡೆದವು . ಅಲ್ಲದೇ ಭಕ್ತಿ ಗೀತೆ , ವಿಷ್ಣು ಸಹಸ್ರನಾಮ ಪಾರಾಯಣ ನಡೆದವು . ಬೆಳಿಗ್ಗೆಯಿಂದಲೆ ನೂರಾರು ಭಕ್ತರು ಸರದಿಸಾಲಿನಲ್ಲಿ ನಿಂತು ದೇವರದರ್ಶನ ಪಡೆದರು .ಭಕ್ತ ರಿಗೆ ಪ್ರಸಾದವಿತರಣೆ ನಡೆಯಿತು . ಈ ಸಂಧರ್ಭದಲ್ಲಿ ಆರ್ಯವೈಶ್ಯ ಸಮಾಜದಮುಖಂಡರಾದ ಎಂ .ವಿಶ್ವನಾಥ ಶೆಟ್ಟಿ , ಜಿ . ಸತ್ಯನಾರಾಯಣ ಶೆಟ್ಟಿ , ಎಸ್ . ಶ್ರೀರಾಮ ಮೂರ್ತಿ ಶೆಟ್ಟಿ , ಐ .ರತ್ನಯ್ಯಶೆಟ್ಟಿ , ಆರ್ .ಬಸವರಾಜ , ಎಂ .ಪರ್ವತರಾಜಶೆಟ್ಟಿ , ಡಿ.ರಾಘವೇಂದ್ರ ಶೆಟ್ಟಿ , ಮಹಿಳಾ ಸಮಾಜದ ವೀಣಾ ಶ್ರೀನಿವಾಸ , ವಿಜಯಲಕ್ಷ್ಮಿ , ಸುನಂದಮ್ಮ , ಕನಕಲಕ್ಷ್ಮಿ , ನಾಗಲಕ್ಷ್ಮಿ , ಚಂದ್ರಕಲಾ ಸೇರಿದಂತೆ ಹಲವರು ಭಾಗಿಗಳಾಗಿದ್ದರು .

LEAVE A REPLY

Please enter your comment!
Please enter your name here