ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ…

0
130

ಚಿಕ್ಕಬಳ್ಳಾಪುರ/ ಗುಡಿಬಂಡೆ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮದಿಂದ ಅಧ್ಯಯನ ಕಡೆಗೆ ಹೆಚ್ಚು ಒತ್ತು ನೀಡಿದಾಗ ಭವಿಷ್ಯ ಉಜ್ವಲವಾಗಲು ಸಾಧ್ಯವೆಂದು ಶ್ರೀ ಬಾಲಾಜಿ ವಿದ್ಯಾ ಮತ್ತು ಕ್ರೀಡಾ ಟ್ರಸ್ಟ್ ನ ಅಧ್ಯಕ್ಷೆ ಎಲ್.ಯೋಗೀಶ್ವರಿ ವಿಜಯ್ ತಿಳಿಸಿದರು.ಪಟ್ಟಣದ
ಶ್ರೀ ಅರವಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ವಿದ್ಯಾರ್ಥಿ ಕಠಿಣ ಪರಿಶ್ರಮದಿಂದ ಅಭ್ಯಾಸ ಮಾಡಿದರೇ ಯಶಸ್ಸು ಕಾಣಲು ಸಾಧ್ಯ. ಸಾಧನೆ ಅಥವಾ ಯಶಸ್ಸು ರಾತ್ರೋರಾತ್ರಿ ಸಿಗುವುದಲ್ಲ. ಅದಕ್ಕೆ ನಿರಂತರವಾದ ಕಠಿಣ ಪರಿಶ್ರಮ ಇರಬೇಕು. ಕೇವಲ ಪಠ್ಯ ಪುಸ್ತಕ ಓದಿ ಅಂಕ ಗಳಿಸಿ ರ್ಯಾಂಕ್ ಪಡೆದರೆ ಸಾಲದು. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ವಿದ್ಯಾರ್ಥಿಗಳಿಗೆ ಓದಿನ ವಿಶ್ಲೇಷಣೆ, ಅನ್ವೇಷಣೆ ಜೊತೆಗೆ ದೇಶದ ಪರಂಪರೆ, ಇತಿಹಾಸ ಹಾಗೂ ಭೌಗೋಳಿಕ ಅಂಶಗಳ ಅರಿವು ಬಹಳ ಮುಖ್ಯವಾದುದು. ಕೆಲಸಕ್ಕಾಗಿ ಓದಿದರೆ ವಿದ್ಯಾರ್ಥಿಗಳಿಗೆ ನಿರಾಶೆ ಕಟ್ಟಿಟ್ಟ ಬುತ್ತಿ. ಕೌಶಲ್ಯಭರಿತ ಶಿಕ್ಷಣ ಇಲ್ಲದಿದ್ದರೆ ಸಮಾಜದಲ್ಲಿ ನಿರುಪಯುಕ್ತರಾಗುತ್ತೀರಿ. ಜೀವನದಲ್ಲಿ ಅಸಾಧ್ಯ ವಾದದ್ದು ಯಾವುದೂ ಇಲ್ಲ. ಸಾಧನೆಗೆ ಮನಸ್ಸು ಮತ್ತು ಶ್ರಮಬೇಕು. ಗುರಿ ಸಾಧನೆಗೆ ತಪ್ಪಸ್ಸಿನಂತೆ ಕಷ್ಟ ಪಟ್ಟು ಓದಿದಾಗ ಯಶಸ್ಸು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಪಡೆಯಬಹುದು. ಉತ್ತಮ ವಿದ್ಯಾವಂತರಾಗಿ ಸಮಾಜಕ್ಕೆ ಮತ್ತು ಪೆÇೀಷಕರಿಗೆ ದಾರಿ ದೀಪರಾಗಬೇಕು. ಈ ಹಿನ್ನೆಲೆಯಲ್ಲಿ ಶಾಲೆಯ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ನಂತರ ಪ.ಪಂ. ಅಧ್ಯಕ್ಷ ಜಿ.ಎಸ್.ಚಂದ್ರಶೇಖರನಾಯ್ಡು ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಉನ್ನತವಾದ ಗುರಿ ಹೊಂದುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಗುರಿ ಹೊಂದಲು ಪ್ರಯತ್ನಿಸಬೇಕು. ಶಿಕ್ಷಕರೂ ಸೇರಿದಂತೆ ಪೆÇೀಷಕರು ಸಹ ತಮ್ಮ ಮಕ್ಕಳನ್ನು ಅವರಿಗಿರುವ ಆಸಕ್ತಿಯನ್ನು ಮನಗಂಡು ಆ ಕ್ಷೇತ್ರದಲ್ಲಿ ಬೆಳೆಯಲು ಬಿಡಬೇಕು. ಇತ್ತೀಚಿಗೆ ವಿದ್ಯಾರ್ಥಿಗಳು ಮೊಬೈಲ್, ಟಿ.ವಿ. ಇಂಟರ್‍ನೆಟ್‍ಗೆ ದಾಸರಾಗದೇ ಓದಿನ ಕಡೆ ಗಮನಹರಿಸಬೇಕು. ಇಂಟರ್ನೆಟ್ ಮೂಲಕ ತಮಗೆ ಓದಿಗೆ ಬೇಕಾದ ವಿಷಯವನ್ನು ಮಾತ್ರ ತೆಗೆದುಕೊಳ್ಳಲು ಬಳಸಿ ಕೊಳ್ಳಬೇಕು. ವಿದ್ಯಾರ್ಥಿಗಳಾದ ತಾವು ಶಿಕ್ಷಣದ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ದಿ ಹೊಂದಬಹುದು ಎಂದರು.

ಕಾರ್ಯಕ್ರಮದಲ್ಲಿ 10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದುಕೊಂಟಂತಹ ವಿದ್ಯಾರ್ಥಿಗಳಾದ ವಿ.ಮೌನಶ್ರೀ, ಯಶ್ವಂತ್‍ರೆಡ್ಡಿ, ಎನ್.ನವಿತ ರನ್ನು ಅಭಿನಂದಿಸಲಾಯಿತು. ಈ ವೇಳೆ ಶಿಕ್ಷಣ ಇಲಾಖೆಯ ಟಿಪಿಒ ಶಿವಪ್ರಕಾಶ್, ಶಾಲೆಯ ಕಾರ್ಯದರ್ಶಿ ಪ್ರದೀಪ್‍ಕುಮಾರ್, ಪ್ರೌಢಶಾಲೆಯ ಮುಖ್ಯೋಪಾಧ್ಯಯ ಗೋವರ್ಧನ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯನಿ ರಶ್ಮೀ ಪ್ರದೀಪ್, ಸಹ ಶಿಕ್ಷಕರಾದ ಶ್ರೀನಿವಾಸ್, ಮನೋಹರ್, ಶ್ರೀದೇವಿ, ಕೋಮಲ, ರವಿ ಸೇರಿದಂತೆ ಹಲವರು ಇದ್ದರು.

LEAVE A REPLY

Please enter your comment!
Please enter your name here