ಶ್ರೀಗಳ ನಡೆ ಟೀಕಿಸುವುದು ಬೇಡ ….

0
292

ಬಳ್ಳಾರಿ /ಹೊಸಪೇಟೆ: ಉಡುಪಿ ಮಠದ ಕ್ಷೇತ್ರದಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಮ್ಮಿಕೊಂಡಿದ್ದ ಇಪ್ತಾರ್ ಕೂಟವು ಸಾಮಾರಸ್ಯ ಸದ್ಭಾವನೆಯ ಸಂಕೇತವಾಗಿದ್ದು, ಹಿಂದೂ ಸಂಘಟನೆಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸ್ಥಳೀಯ ಶ್ರೀ ಕೊಟ್ಟೂರು ಸಂಸ್ಥಾನ ಮಠದ ಡಾ.ಸಂಗನ ಬಸವ ಮಹಾಸ್ವಾಮಿಗಳು ಹೇಳಿದರು.

ನಗರದ ಶಾದಿಮಹಲ್‌ನಲ್ಲಿ ಗುರುವಾರ ಅಂಜುಮನ್ ಕಮಿಟಿ ವತಿಯಿಂದ ಆಯೋಜಿಸಿದ್ದ ಮುಸ್ಲಿಂ ಬಾಂಧವರ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಹಮ್ಮಿಕೊಂಡಿದ್ದ ಇಪ್ತಾರ್ ಕೂಟವು ಹಿಂದೂ ಧರ್ಮದ ಶ್ರೇಷ್ಠತೆಯನ್ನು ತೋರಿಸುತ್ತದೆ. ಅವರ ಕಾರ್ಯ ಸ್ವಾಗತರ್ಹವಾಗಿದೆ. ಹಿಂದೂ ಧರ್ಮ ಎಲ್ಲಾ ಧರ್ಮಿಯರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾ ಬಂದಿದೆ. ಭಾರತ ಸಂವಿಧಾನದಲ್ಲಿ ಎಲ್ಲಾ ವರ್ಗದವರಿಗೆ ಸಮಾನ ಗೌರವ ನೀಡಲಾಗಿದೆ. ಇಸ್ಲಾಂ ಧರ್ಮದವರನ್ನು ಸಹ ಭಾರತದ ರಾಷ್ಟ್ರಪತಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಸರ್ವ ಧರ್ಮ ಸಮನ್ವಯ ಸಾರುವ ಕಾರ್ಯಕ್ರಮಗಳಿಗೆ ಯಾರು ಅಡ್ಡಿಯನುಂಟು ಮಾಡುವುದಾಗಲಿ, ಟೀಕೆ ಮಾಡುವುದು ಹಿಂದೂ ಸಂಸ್ಕೃತಿಗೆ ಶೋಭೆ ತರುವುದಿಲ್ಲ. ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here