ಶ್ರೀಗಳ ಹೇಳಿಕೆ ಖಂಡಿಸಿ ಪ್ರತಿಭಟನೆ.

0
134

ರಾಯಚೂರು:ಉಡುಪಿಯ ಪೇಜಾವರಶ್ರೀಯವರು ಭಾರತ ಸಂವಿಧಾನವನ್ನು ಬದಲಾಯಿಸಬೇಕೆಂದು ನೀಡಿದ್ದ ಹೇಳಿಕೆಯನ್ನು ಖಂಡಿಸಿ ಧರ್ಮಪ್ರಚಾರ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್‍ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, 1950 ನವೆಂಬರ್ 26 ರಂದು ಭಾರತ ಸಂವಿಧಾನ ಅಂಗೀಕಾರವಾದ ದಿನವಾಗಿದೆ. ಅಂಬೇಡ್ಕರ್‍ರವರು ರಚಿಸಿದ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ. ದೇಶದಲ್ಲಿ ಅನೇಕ ಧರ್ಮಗಳು, ಜಾತಿಗಳು, ಆಚಾರ-ವಿಚಾರಗಳು ಮತ್ತು ಪದ್ಧತಿಗಳು ಹಾಗೂ ಅಸ್ಪøಶ್ಯರ ಅಭಿವೃದ್ಧಿಗಾಗಿ ಸಂವಿಧಾನ ರಚನೆಯಾಗಿದೆ. ದೇಶಕ್ಕೆ ಸಂವಿಧಾನವೇ ಶಕ್ತಿಯಾಗಿದೆ. ಸಂವಿಧಾನವನ್ನು ಬದಲಾಯಿಸುವ ಮೂಲಕ ದೇಶವನ್ನು ಒಡೆಯುವ ಕೆಲಸ ಮಾಡಲಾಗುತ್ತದೆ. ವಿಶ್ವಕ್ಕೆ ಮಾದರಿಯಾದ ಭಾರತ ಸಂವಿಧಾನ ದೇವರನ್ನು ರಕ್ಷಣೆ ಮಾಡುವ ಶಕ್ತಿ ಎಂದು ಹೇಳಲಾಗುತ್ತದೆ. ಬೈಬಲ್, ಖುರಾನ್ ಮತ್ತು ಗೀತಾದಿಂದ ನಮ್ಮ ದೇಶ ನಡೆಯುತ್ತಿರುವುದು ಶ್ರೇಷ್ಠ ಸಂವಿಧಾನದಿಂದ ದೇಶದ್ರೋಹ ಮಾಡುವ ಹೇಳಿಕೆಗಳಿಂದ ಭಾರತವನ್ನು ಒಡೆಯುವ ಕೆಲಸ ಮಾಡುತ್ತಿರುವವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರವಿಕುಮಾರ, ಕೆ.ಇ.ಕುಮಾರ, ವಿಶ್ವನಾಥ, ಪ್ರಾಣೇಶ, ಶಂಕರ, ಭೀಮಣ್ಣ, ಮಹೇಶ, ನಾಗರಾಜ, ಶಿವರಾಜ, ರಂಗಸ್ವಾಮಿ, ಸಂತೋಷ, ಕೇಶವ ಸೇರಿದಂತೆ ಅನೇಕರು ಇದ್ದರು..

LEAVE A REPLY

Please enter your comment!
Please enter your name here