ಶ್ರೀದೇವಿ ಆತ್ಮಹತ್ಯೆ ಪ್ರಕರಣ (ಪಿಹೆಚ್‌‌ಡಿ ವಿದ್ಯಾರ್ಥಿನಿ)

0
149

ಬಳ್ಳಾರಿ: ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌‌ಡಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಂಪಿ ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆ

ವಿದ್ಯಾರ್ಥಿನಿಗೆ ತಿಪ್ಪಣ್ಣ ಎಂಬ ವ್ಯಕ್ತಿಯು ಮದುವೆಯಾಗುವುದಾಗಿ ಮೋಸ ಮಾಡಿದ್ದಾನೆ ಹಾಗೂ ಆಕೆಗೆ ಆಕೆಯ ಗೈಡ್ ಹಣ ನೀಡಬೇಕೆಂದು ಪೀಡಿಸುತ್ತಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿದ್ಯಾರ್ಥಿನಿ ಶ್ರೀದೇವಿ ಡೆತ್‌ನೋಟ್ ಬರೆದಿಟ್ಟು ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.

ಭವಿಷ್ಯ ರೂಪಿಸಬೇಕಾದ ಮಾರ್ಗದರ್ಶಕ, ಜೀವನ ನೀಡಬೇಕಾದ ಪ್ರಿಯಕರ ಇವರಿಬ್ಬರ ಮೋಸ, ಲೈಂಗಿಕ ಆಸೆ, ಹಣದ ದಾಹಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಆಂತರಿಕ ಅಂಕ, ವೈವಾ ಹೆಸರಿನಲ್ಲಿ ಹಣ ಸುಲಿಗೆ ಮಾಡುವುದು, ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು ಹೆಚ್ಚಾಗುತ್ತಲೇ ಇದೆ. ಶಿಕ್ಷಣ ನೀಡಿ ಬದುಕು ರೂಪಿಸಬೇಕಾದ ವ್ಯಕ್ತಿಗಳು ಬಲಿ ತೆಗೆದುಕೊಳ್ಳುವ ಸ್ಥಿತಿ ತಲುಪಿರುವುದು ಶೈಕ್ಷಣಿಕ ಹತ್ಯೆ ನಡೆಸಿದಂತೆ ಆಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಶ್ರೀದೇವಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಕನ್ನಡ ವಿವಿ ಆಡಳಿತ ಕಚೇರಿ ಕ್ರಿಯಾಶಕ್ತಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕುಲಪತಿ ಮಲ್ಲಿಕಾಘಂಟಿ ಅವರಿಗೆ ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here