ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ..

0
234

ವಿಜಯಪುರ/ಸಿಂದಗಿ:ಜಾತ್ರೆಗಳು ನಮ್ಮ ನಾಡಿನ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಜಾತ್ರೆಗಳಿಂದ ಸಮಾಜಕ್ಕೆ ನೈತಿಕ ಮೌಲ್ಯಗಳನ್ನು ನೀಡುತ್ತವೆ ಎಂದು ಸ್ಥಳಿಯ ಸಾರಂಗಮಠ-ಗಚ್ಚಿನಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರರು ಹೇಳಿದರು.

ಪಟ್ಟಣದಲ್ಲಿ ಸಾರಂಗಮಠದಲ್ಲಿ ವೀರಭಧ್ರೇಶ್ರರ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ವೀರಭದ್ರೇಶ್ವರ ದೇವರ ಪಂಚ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾತ್ರೆಗಳು ನಮ್ಮನ್ನು ಒಂದು ಮಾಡುತ್ತೇವೆ. ಭಾವನಾತ್ಮಕವಾಗಿ ದೇವರನಲ್ಲಿ ನಂಬಿಕೆಯಿಟ್ಟು ಕೆಲಸ ಮಾಡುತ್ತೇವೆ. ಪ್ರತಿ ಮನೆ ಮನೆಯಲ್ಲಿ ಹಬ್ಬದವಾತಾವರಣ ಸೃಷ್ಠಿ ಮಾಡುವ ಜೊತೆಗೆ ಜೀವನದಲ್ಲಿ ಆನಂದ-ನೆಮ್ಮದಿ ನೀಡುವ ಕಾರ್ಯಗಳಾಗುತ್ತವೆ ಎಂದರು.
ಪಟ್ಟಣದ ಸಾರಂಗಮಠದಿಂದ ಪಟ್ಟಣದ 2 ಪಲ್ಲಕ್ಕಿಗಳು ಸೇರಿದಂತೆ ತಾಲೂಕಿನ ಯರಗಲ್ ಬಿ.ಕೆ., ಮೋರಟಗಿ, ಕನ್ನೊಳ್ಳಿ, ಮಲಘಾಣ ಗ್ರಾಮಗಳಿಂದ ಆಗಮಿಸಿದ ವೀರಭದ್ರೇಶ್ವರ ಪಂಚ ಪಲ್ಲಕ್ಕಿಗಳ ಉತ್ಸವ ಸಕಲ ವಾದ್ಯಗಳೊಂದಿಗೆ ಪ್ರಾರಂಭÀವಾಗಿ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಶ್ರೀ ಪದ್ಮರಾಜ ಪ್ರೌಢಶಾಲೆಯ ಆವರಣದಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ತಲುಪಿದವು. ಮಾರ್ಗದುದ್ದಕ್ಕೂ ಪುರವಂತರರು ಸೇವೆ ಸಲ್ಲಿಸಿದರು.
ದೇವಸ್ಥಾನದ ಆವರಣದಲ್ಲಿರುವ ಅಗ್ನಿಕುಂಡದ ಸೂತ್ತಲು ಪಲ್ಲಕ್ಕಿಗಳು ಹಾಗೂ ಪೂರವಂತರರು ಪ್ರದಕ್ಷಿಣೆಹಾಕಿದದರು. ನಂತರ ಸಾರಂಗಮಠ-ಗಚ್ಚಿನಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರರು, ಊರನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯರು ಪೂಜೆ ಸಲ್ಲಿಸಿದರು. ನಂತರ ಪಲ್ಲಕ್ಕಿಗಳೋಂದಿಗೆ ಭಕ್ತರು ಹಾಗೂ ಪುರವಂತರು ಅಗ್ನಿಕುಂಡದಲ್ಲಿ ಹಾಯ್ದು ಭಕ್ತಿ ಪ್ರದರ್ಶನ ತೋರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾದರು.
ಧರ್ಮದರ್ಶಿ ಶಿರುಗೌಡ ದೇವರಮನಿ, ಶಿವಮೂರ್ತಯ್ಯ ಮಠಪತಿ, ಅಖಿಲ ಭಾರತ ವೀರಶೈವ ಸಮಾಜದ ತಾಲೂಕಾ ಅಧ್ಯಕ್ಷ ಅಶೋಕ ವಾರದ, ಗಂಗಾಧರ ಜೋಗುರ, ಜಂಗಮ ಸಮಾಜದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ, ಪ್ರೋ. ವ್ಹಿ.ಡಿ.ವಸ್ತ್ರದ, ಶ್ರೀಶೈಲ ನಂದಿಕೋಲ, ಶರಣಯ್ಯ ಮಠ, ವಿಶ್ವನಾಥ ನಂದಿಕೋಲ, ಸಿ.ಎಂ.ಪೂಜಾರಿ, ಗುರುಶಾಂತಯ್ಯ ಜಂಗಿನಮಠ, ಶರಣು ಜೋಗುರ, ಪಿ.ಎಂ.ಮಡಿವಾಳರ, ಬಿ.ಜಿ.ಅವಟಿ, ಬಾಬು ಡೊಳ್ಳಿ, ಶ್ರೀಕಾಂತ ಕುಂಬಾರ, ಕುಮಾರಸ್ವಾಮಿ ಜಹಾಗೀರದಾರ ಸೇರಿದಂತೆ ತಾಲೂಕಿನ ಮೋರಟಗಿ, ಬಂದಾಳ, ಚಿಕ್ಕಸಿಂದಗಿ, ಕನ್ನೋಳ್ಳಿ, ಮಲಘಾಣ, ಯರಗಲ್ ಬಿ.ಕೆ., ಬ್ಯಾಕೋಡ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು, ಮಹಿಳೆಯರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು

LEAVE A REPLY

Please enter your comment!
Please enter your name here