ಸಂಕೀರ್ತನಾ ಯಾತ್ರೆ

0
179

ಬಳ್ಳಾರಿ/ಹೊಸಪೇಟೆ:ಹನುಮ ಮಾಲಾಧೀಕ್ಷಾ ನಿಮಿತ್ತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಆಂಜನೇಯ ಸ್ವಾಮಿಯ ಭವ್ಯ ಸಂಕೀರ್ತನಾ ಯಾತ್ರೆ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗುರುವಾರ ನಡೆಯಿತು.

ಹನುಮ ಮಾಲಾ ಸೇವಾ ಸಮಿತಿ ವತಿಯಿಂದ ಶ್ರೀ ವಡಕರಾಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಸಂಕೀರ್ತನಾಯಾತ್ರೆಗೆ ಶಾಸಕ ಆನಂದಸಿಂಗ್, ಚಾಲನೆ ನೀಡಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಹನುಮ ಮಾಲೆ ಧರಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಹನುಮ ಮಾಲಾಧಾರಿಗಳು, ಶ್ರದ್ಧಾ-ಭಕ್ತಿಯಿಂದ ಹನುಮ ವ್ರತಾಚರಣೆಯನ್ನು ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ಬಾಂಧವ್ಯ ಹಾಗೂ ವಾತಾವರಣ ನಿರ್ಮಾಣಕ್ಕಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

LEAVE A REPLY

Please enter your comment!
Please enter your name here