ಸಂಕ್ರಾಂತಿ ಉತ್ಸವ ಕಾರ್ಯಕ್ರಮ..

0
105

ಬೆಂಗಳೂರು/ಮಹದೇವಪುರ:ವಿನಾಃಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ,ಯಡಿಯೂರಪ್ಪ, ಜನಾರ್ಧನ ರೆಡ್ಡಿ ಜೈಲಿಗೆ ಹೋಗಿಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವ್ಯಂಗವಾಡುತ್ತಿದ್ದಾರೆ ಅವರ ಮೇಲೆ ಇರುವ ಆರೋಪಗಳನ್ನು ಸಾಬೀತುಪಡಿಸಲು ಬಿಜೆಪಿ ಪಕ್ಷವನ್ನು ಅಡಳಿತಕ್ಕೆ ತನ್ನಿ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದರು. ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಆಯೋಜಿಸಿದ್ದ “ಸಂಕ್ರಾಂತಿ ಉತ್ಸವ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು ಸಿದ್ದರಾಮಯ್ಯ ಮಾತು ಮಾತಿಗೂ ಅಮಿತ್ ಷಾ ,ಯಡಿಯೂರಪ್ಪ, ಜನಾರ್ಧನ ರೆಡ್ಡಿ ಜೈಲಿಗೆ ಹೋಗಿಬಂದಿದ್ದಾರೆ ಎಂದು ವ್ಯಂಗವಾಡುತ್ತಿದ್ದಾರೆ, ಎಲ್ಲರೂ ತಮ್ಮ ಮೇಲಿದ್ದ ಆರೋಪಗಳಿಂದ ಹೊರಬಂದಿದ್ದಾರೆ, ನನ್ನ ಮೇಲೆ 117 ಕೇಸುಗಳು ದಾಖಲಾಗಿದ್ದವು ಅವುಗಳಲ್ಲಿ 113 ಕೇಸುಗಳಲ್ಲಿ ಆರೋಪ ಮುಕ್ತನಾಗಿ ಹೊರಬಂದಿದ್ದೇನೆ ವಕೀಲರಾಗಿರುವ ಅವರಿಗೆ ಇದರ ಬಗ್ಗೆ ತಿಳುವಳಿಕೆ ಇರಬೇಕಿತ್ತು ಅದರೆ ಸುಖಾ ಸುಮ್ಮನೇ ಆರೋಪ ಮಾಡುತ್ತಿರುವ ಸಿದ್ದರಾಮಯ್ಯರಿಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು. ಬಿಜೆಪಿ ಶಾಸಕರಾದ ಆನಂದ ಸಿಂಗ್ ಹಾಗೂ ನಾಗೇಂದ್ರರನ್ನು ಪಕ್ಷಕ್ಕೆ ಸೆಳೆದುಕೊಂಡು ಕಾಂಗ್ರೆಸ್ ಪಕ್ಷವನ್ನು ಬಳ್ಳಾರಿಯಲ್ಲಿ ಬಲಪಡಿಸಲು ಹುನ್ನಾರ ನಡೆಸಿರುವ ಸಿದ್ದರಾಮಯ್ಯರ ಕನಸು ನನಸಾಗುವುದಿಲ್ಲ, ಆ ರೀತಿ ಏನಾದರೂ ಆದರೇ ಬಳ್ಳಾರಿಯ 9 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯಥರ್ಿಗಳು ಠೇವಣಿ ಕಳೆದು ಕೊಂಡು ಸರ್ವ ನಾಶವಾಗಲಿದೆ ಎಂದರು. ಯಾವುದೇ ಕಾರಣಕ್ಕೂ ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಾಡಲು ಬಿಡುವುದಿಲ್ಲ ಅಲ್ಲಿನ ಪ್ರತಿಯೊಬ್ಬ ನಾಗರೀಕನೂ ಒಬ್ಬೊಬ್ಬ ಜನಾರ್ಧನರೆಡ್ಡಿಯಾಗಿದ್ದಾರೆ 9 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಸಂಕ್ರಾಂತಿ ಎಂಬುದು ರೈತರಿಗೆ ನೀಡುವಂತಹ ದೊಡ್ಡ ಗೌರವ, ರೈತನಿಲ್ಲದಿದ್ದರೆ ದೇಶದಲ್ಲಿ ಎಲ್ಲವೂ ಗೌಣ, ತಾನೂ ಕಷ್ಟದಲ್ಲಿದ್ದರೂ ಮತ್ತೊಬ್ಬರ ಹೊಟ್ಟೆ ತುಂಬಿಸಲು ಹೆಣಗಾಡುತ್ತಾನೆ ಅವರಿಗೆ ನಾವು ಎಷ್ಟು ಗೌರವ ಕೊಟ್ಟರೂ ಸಾಲದು. ಗೋಮಾತೆಗೆ ಮತ್ತು ರೈತರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಲೇ ಸಂಕ್ರಾಂತಿಯನ್ನು ಆಚರಿಸಲಾಗುತ್ತಿರುವುದು ವಿಶಿಷ್ಟವಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವೆ ಪುರಂದರೇಶ್ವರಿ, ನಟ ಗಣೇಶ್, ಕಾರ್ಯಕ್ರಮದ ಆಯೋಜಕ ಮಹೇಂದ್ರಮೋದಿ,ಕ್ಷೇತ್ರಾಧ್ಯಕ್ಷ ರಾಜಾರೆಡ್ಡಿ,ಪಾಲಿಕೆ ಸದಸ್ಯರಾದ ಎಸ್.ಮುನಿಸ್ವಾಮಿ, ಪುಷ್ಪಾಮಂಜುನಾಥ್, ಆಶಾಸುರೇಶ್, ಮುಖಂಡರಾದ ಜಯಚಂದ್ರಾರೆಡ್ಡಿ, ವೆಂಕಟಸ್ವಾಮಿರೆಡ್ಡಿ ಹೂಡಿವಿಜಯಕುಮಾರ್ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here