ಸಂಕ್ರಾಂತಿ ಉತ್ಸವ, ಕೆ.ಆರ್.ಪುರದಲ್ಲಿ ಗ್ರಾಮಿಣ ಸೊಗಡಿನ ಸಂಕ್ರಾಂತಿ ಆಚರಣೆ

0
161

ಸಂಕ್ರಾಂತಿ ಉತ್ಸವ, ಕೆ.ಆರ್.ಪುರದಲ್ಲಿ ಗ್ರಾಮಿಣ ಸೊಗಡಿನ ಸಂಕ್ರಾಂತಿ ಆಚರಣೆ
ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿ ಹಬ್ಬವನ್ನು ಸಂಕ್ರಾಂತಿ ಉತ್ಸವ ಹೆಸರಿನಲ್ಲಿ ನಗರದ ಜನರು ಮನೆಮಂದಿಯಲ್ಲ ಸೇರಿ ಹೊಸ ಬಟ್ಟೆ ದರಿಸಿ ಪೊಂಗಲ್ ಹಾಗೂ ಎಳ್ಳು ಬೆಲ್ಲ, ಕಬ್ಬು ವಿತರಿಸುವ ಮೂಲಕ ಹಳ್ಳಿ ಸೊಗಡಿನ ರೀತಿಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಅದೆಲ್ಲಿ ಅಂತೀರ ಈ ಸ್ಟೋರಿ ನೋಡಿ.
ಹೀಗೆ ಕಬ್ಬಿನ ಜಲ್ಲೆಗಳಿಂದ ಸಿಂಗಾರಗೊಂಡಿರುವ ರಸ್ತೆ, ಹೊಸ ಬಟ್ಟೆ ದರಿಸಿ ಪೊಂಗಲ್ ಮಾಡಿ, ಅದರೊಟ್ಟಿಗೆ ಎಳ್ಳು ಬೆಲ್ಲ ವಿತರಿಸುತ್ತಿರುವ ಜನರು. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಕೆ.ಆರ್.ಪುರದ ನೇತಾಜಿ ಬಡಾವಣೆಯಲ್ಲಿ. ಇಲ್ಲಿ ಬಡಾವಣೆಯ ಎಲ್ಲಾ ಕುಟುಂಬಗಳು ಒಟ್ಟಾಗಿ ಸೇರಿ ಇಂದು ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು‌.
ಈ ಸಂದರ್ಭದಲ್ಲಿ ಸ್ಥಳಿಯ ಪಾಲಿಕೆ ಸದಸ್ಯೆ ಪೂರ್ಣಿಮಾ ಶ್ರೀನಿವಾಸ್ ಭಾಗವಹಿಸಿ ಬಡಾವಣೆ ಜನರ ಜೊತೆ ಬೆರತು ಹಬ್ಬ ಆಚರಿಸಿದರು. ಇದೇ ವೇಳೆ ಎಲ್ಲಾ ಮಹಿಳೆಯರಿಗೆ ಅರಿಶಿನ ಕುಂಕುಮ ನೀಡುವ ಮೂಲಕ ಶುಭ ಕೋರಿದರು. ಒಟ್ಟಾರೆ ಇತ್ತೀಚಿನ ಆಧುನಿಕತೆಯ ಬದುಕಿನಲ್ಲಿ ಜನರು ಹಬ್ಬಗಳ ಆಚರಣೆ ಯನ್ನೆ ಮರೆತಿರುವಾಗ, ಇಲ್ಲಿನ ಜನರು ಒಟ್ಟಾಗಿ ಸೇರಿ ಹಬ್ಬ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

LEAVE A REPLY

Please enter your comment!
Please enter your name here