ಸಂಗೀತೋತ್ಸವ

0
206

ಬಳ್ಳಾರಿ /ಬಳ್ಳಾರಿ: ಶ್ರೀ ಅಯ್ಯಪ್ಪ ಮಂದಿರದಲ್ಲಿ ಬಳ್ಳಾರಿ ಮ್ಯೂಸಿಕ್ ಕ್ಲಬ್ ಇವರು ಸಂಗೀತೋತ್ಸವ-2017 ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ದ ಖ್ಯಾತ ಗಾಯಕರಾದ ಉನ್ನಿಕೃಷ್ಣನ್ ಮತ್ತು ತಂಡದವರು ಹರಿದಾಸರ ದೇವರ ನಾಮಗಳನ್ನು ಹಾಡಿ ಸಂಗೀತಾಸಕ್ತರ ಗಮನ ಸೆಳೆದರು.
ಶ್ರೀ ಅಯ್ಯಪ್ಪ ಮಂದಿರದ ಸನ್ನಿಧಿಯಲ್ಲಿ ಸುಂದರ ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರು ಮತ್ತು ತೆಲುಗಿನ ಅನ್ನಮಯ್ಯ ಕೀರ್ತನೆಗಳನ್ನು ಉನ್ನಿಕೃಷ್ಣನ್ ಅವರು ಭಕ್ತಿಭರಿತರಾಗಿ ಹಾಡಿ ಸಂಗೀತೋತ್ಸವ ಯಶಸ್ವಿಗೊಳಿಸಿಕೊಟ್ಟರು.
ಚಾರುಲತಾ ರಾಮಾನುಮ್ ಅವರು ವಾಯಲಿನ್ ವಾದನ, ಹೆಚ್.ಎಸ್.ಸುಧೀಂದ್ರ ಅವರು ಮೃದಂಗ, ರಂಗನಾಥ್ ಚಕ್ರವರ್ತಿ ಘಟಮ್ ವಾದ್ಯದ ಸಾಥ್ ನೀಡಿದರು.
ಬಳ್ಳಾರಿ ಮ್ಯೂಸಿಕ್ ಕ್ಲಬ್ ನ ಜಯಪ್ರಕಾಶ್ ಜೆ, ಗುಪ್ತ, ಸಂಗೀತ ವಿದೂಷಿ ಶ್ರೀಮತಿ ಸಂಧ್ಯಾ ರಾವ್ ಸೇರಿದಂತೆ ಅನೇಕ ಸಂಗೀತ ಪ್ರಿಯರು ಈ ಸಂದರ್ಭದಲ್ಲಿ ಇದ್ದರು

LEAVE A REPLY

Please enter your comment!
Please enter your name here