ಸಂಬಳಕ್ಕಾಗಿ ಪೌರಕಾರ್ಮಿಕರ ಪ್ರತಿಭಟನೆ

0
172

ಶಿಡ್ಲಘಟ್ಟ: ಪೌರಕಾಮಿ೯ಕರಿಗೆ ೫ ತಿಂಗಳಿಂದ ವೇತನ ನೀಡದ ಕಾರಣ ವಾರದಿಂದ ನಗರದಲ್ಲಿ ಸ್ವಚ್ಛತೆಯು ನಿಲ್ಲಿಸಿರುವ ಪೌರಕಾಮಿ೯ಕರು. ಈ ವಿಷಯವು  ನನ್ನ ಗಮನಕ್ಕೆ ಬಂದಿಲ್ಲ ಎಂದು  ನಗರಸಭೆ ಅಧ್ಯಕ್ಷ ಅಪ್ಸರ್ ಪಾಷ ಹಾರಿಕೆ ಉತ್ತರ ನೀಡಿದರು

ನಗರಭೆ ಆವರಣದಲ್ಲಿ ಕೂಲಿ ಮಾಡಿದ ಸಂಬಳಕ್ಕಾಗಿ ಪೌರಕಾಮಿ೯ಕರು ಧರಣಿ ನಡೆಸಿದರು.

ಒಂದು ವತ್ತಿನ ತುತ್ತಿಗಾಗಿ ಪರದಾಡುವ ಸ್ಥಿತಿ ನಮ್ಮದು ಇನ್ನು ಸಂಸಾರ ಜವಾಬ್ದಾರಿ ಹೊತ್ತು ಮಕ್ಕಳ ಪೋಷಣೆ ಮಾಡುವುದು ಹೇಗೆ ನಾವು ನಗರದ ಸ್ವಚ್ಚತೆಯನ್ನು ನಮ್ಮ ಮನೆ ಎಂದು ತಿಳಿದು ಕೆಲಸ ನಿವ೯ಹಿಸುತ್ತೇವೆ. ಆದರೆ ತಿಂಗಳಾನುಗಟ್ಟಲೆ ಸಂಬಳ ನೀಡಲಿಲ್ಲವಾದರೆ ನಾವು ಮಾಡುವುದಾದರೂ ಏನು ನಮಗೆ ಬರುವ ಸಂಬಳಕ್ಕೆ ಪ್ರತಿಸಾರಿ ಅಧಿಕಾರಿಗಳ ನಡುವೆ ಜಗಳವಾಡಿ ಅಥವಾ ಧರಣಿ ಮಾಡುವಂತಾಗಿದೆ.  ಏದು ದಿನದಿಂದ ನಗರದಲ್ಲಿ ಕಸ ತುಂಬಿದ್ದರೂ ಸಹ ನಮಗೆ ನ್ಯಾಯಯುತವಾಗಿ ನೀಡುವ ಸಂಬಳ ಇದುವರಿಗೂ ನೀಡಲಿಲ್ಲ ಎಂದು ಪೌರಕಾಮಿ೯ಕ ಮಹಿಳೆ ತಮ್ಮ ಅಳಲು ತೋಡಿಕೊಂಡರು.

ನಗರದಲ್ಲಿ ಈಗಾಗಲೆ ಪ್ಲಾಷ್ಟಿಕ್ ಪೇಪರ್ ಚರಂಡಿಯಲ್ಲಿ ತುಂಬಿ ತುಳಿಕುತ್ತಿದೆ. ಮಳೆ ಬಂದರೆ ಚರಂಡಿಯಲ್ಲಿ ನೀರು ಹರಿಯದೆ ಗಲೀಜು ನೀರು ರಸ್ತೆಯಲ್ಲಿ ಹರಿದು ನಾಗರಿಕರು ಮೂಗು ಮುಚ್ಚಿ ಹೊಡಾಡುವಂತಾಗಿದೆ. ವಾಡ೯ಗಳಲ್ಲಿ ಕಸ ರಾಶಿ ರಾಶಿ ಬಿದ್ದಿದೆ ಆದರೂ ಗುತ್ತಿಗೆದಾರರ ನಿಲ೯ಕ್ಷತನ ಎಂದು ನಗರಸಭೆಯ ಅಧಿಕಾರಿಗಳು.

ನಗರಗಳಲ್ಲಿ ನೈಮ೯ಲ್ಯದ ಬಗ್ಗೆ ಹೆಚ್ಚು ಗಮನ ಹರಿಸಲಿ ಮತ್ತು ಕುಡಿಯುವ ನೀರು ಸಮಯಕ್ಕೆ ಸಿಗಲಿ ಎಂದು ಜನ ಸಾಮಾನ್ಯರ ಬೇಡಿಕೆಯಾಗಿದೆ

LEAVE A REPLY

Please enter your comment!
Please enter your name here