ಸಂಭ್ರಮದಿಂದ ರಂಜಾನ್ ಆಚರಣೆ…

0
184

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರ ಮತ್ತು ತಾಲೂಕಿನ ಮುಸಲ್ಮಾನ ಬಾಂಧವರು ಸೋಮವಾರ ಸಂಭ್ರಮದಿಂದ ರಂಜಾನ್ ಆಚರಿಸಿದರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದ ಮುಸ್ಲಿಂ ಸಮುದಾಯ ಸಮಾನತೆ, ಸೌಹಾರ್ದತೆ ಮತ್ತು ಆತ್ಮಾವಲೋಕನದ ಸಂದೇಶದ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಿದರು.

ಇಲ್ಲಿನ ಶಾಂತಿನಗರದಲ್ಲಿರುವ ಈದ್ಗಾದಲ್ಲಿ ಸಾವಿರಾರು ಮಂದಿ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಮೌಲ್ವಿಗಳ ಧರ್ಮೋಪದೇಶದಂತೆ ಎಲ್ಲರೂ ಸಮಾನ ಚಿಂತನೆ ಮತ್ತು ಸಮಾನ ಬದುಕಿನ ಆಶಯದೊಂದಿಗೆ ಪ್ರಾರ್ಥನೆ ಮಾಡಿದ್ದು ವಿಶೇಷವಾಗಿತ್ತು.

ಎಲ್ಲೆಡೆ ಸಂಭ್ರಮ. ದೊಡ್ಡಬಳ್ಳಾಪುರ ನಗರದ ಶಾಂತಿನಗರದ ಹಳೇ ಈದ್ಗಾ, ಚಿಕ್ಕಪೇಟೆ, ಕುಂಬಾರಪೇಟೆ, ಕೋಟೆ ಮಸೀದಿ, ದರ್ಗಾಜೋಗಿಹಳ್ಳಿಗಳಲ್ಲಿ ಕೂಡ ಮುಸಲ್ಮಾನ ಬಾಂಧವರು ಪವಿತ್ರ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಗ್ರಾಮಾಂತರ ಪ್ರದೇಶದ ತೂಬಗೆರೆ, ದೊಡ್ಡಬೆಳವಂಗಲ, ಸಾಸಲು, ಆರೂಡಿ, ಕನಸವಾಡಿ, ಪಾಲನಜೋಗಿಹಳ್ಳಿ, ಬಾಶೆಟ್ಟಿಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತ್ತು ಹೋಬಳಿ ಕೇಂದ್ರಗಳಲ್ಲೂ ಸಾಮೂಹಿಕ ಪ್ರಾಥನೆಗಳು ನಡೆದವು. ಸಾವಿರಾರು ಮುಸಲ್ಮಾನ ಬಂಧುಗಳು ಪರಸ್ಪರ ಈದ್ ಮುಬಾರಕ್ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.

LEAVE A REPLY

Please enter your comment!
Please enter your name here