ಸಂಭ್ರಮದಿಂದ ಶ್ರೀರಾಮನವಮಿ ಆಚರಣೆ…

0
103

ಚಿಕ್ಕಬಳ್ಳಾಪುರ/ಚಿಂತಾಮಣಿ:ಶ್ರೀರಾಮನವಮಿ ಹಬ್ಬದ ಪ್ರಯುಕ್ತ ನಗರ ಸೇರಿದಂತೆ ತಾಲೂಕು ಆದ್ಯಂತ ಹಲವಾರು ದೇವಾಲಯಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ವಿಶೇಷ ಪೂಜೆಗಳನ್ನು ಸಲ್ಲಿಸಿ ಮಜ್ಜಿಗೆ ಪಾನಕ ಮತ್ತು ಹೆಸರು ಬೇಳೆ ಸೇವೆಯನ್ನು ಮಾಡಿದರು.ವಿಶೇಷವಾಗಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮುಂಭಾಗದಲ್ಲಿರುವ ಶ್ರೀರಾಮನವಮಿಯ ವಿಶೇಷ ಪೂಜೆ ಸಲ್ಲಿಸಿದರು.ನಂತರ ಮಾತನಾಡಿದ ಸಾರ್ವಜನಿಕರು ಸುಮಾರು 30 ವರ್ಷಗಳಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಇಂದು ಕ್ಷೇತ್ರದ ಶಾಸಕರಾದ ಜೆ.ಕೆ ಕೃಷ್ಣಾರೆಡ್ಡಿ ರವರು ಸಹಾ ಮಜ್ಜಿಗೆ ಪಾನಕ ಸೇವಿಸಿದ್ದರು ಮತ್ತು ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕರು ಎನ್ ಅರುಣ್ ಬಾಬು ರವರು ಶ್ರೀರಾಮನವಮಿಯ ಹಬ್ಬದ ಪ್ರಯುಕ್ತ ನಾಡಿನ ಹಾಗೂ ಕ್ಷೇತ್ರದ ಸಮಸ್ತ ಜನತೆಗೆ ಶುಭಾಶಯ ಕೋರಿದರು.

LEAVE A REPLY

Please enter your comment!
Please enter your name here