ಸಂಭ್ರಮದ ವಿಜಯೋತ್ಸವ…

0
266

ತುಮಕೂರು/ಪಾವಗಡ: ಸಂಪ್ರಾದಾಯಿ ಚುನಾವಣೆ ಫಲಿತಾಂಶದಿಂದ ತಾಲ್ಲೂಕಿನ ಮತದಾರರು ಹೊರ ಬರಲಾಗಿಲ್ಲಾ ಬದಲಾವಣೆ ಸಾದ್ಯವಾಗಲಿಲ್ಲಾ
ಎಂಬುದು ಈ ಪಲಿತಾಂಶದಿಂದ ತಿಳಿದಿದ್ದು ಕಳೆದ 6
ಚುನಾವಣೆಗಳಿಂದಲೋ ಒಮ್ಮೆ ಕಾಂಗ್ರೆಸ್ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತಿರುವ ಫಲಿತಾಂಶವನ್ನು ನಾವು ಕಾಣಬಹುದು ಈ ಚುನಾವಣೆಯಲ್ಲಿ ಸಂಪ್ರದಾಯ ಮುರಿಯುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿ ಮತ್ತೆ ಸಂಪ್ರದಾಯಕ್ಕೆ ಜೋತು ಬಿದ್ದಂತಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಮಣಪ್ಪ ಆಯ್ಕೆ ಯಾಗಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದ ವಿಜಯೋತ್ಸವ ಆಚರಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು ಪಟಾಕಿಸಿಡಿಸಿ ಜಯಶಾಲಿ ಅಭ್ಯರ್ಥಿ ವೆಂಕಟರಮಣಪ್ಪ ಅವರಿಗೆ ಜಯಘೋಷ ಕೂಗಿ ಸಭ್ರಮಿಸಿದರು.
ಕಾಂಗ್ರೆಸ್ ಬಾವುಟ ಹಿಡಿದ ಯುವಕರು ದ್ವಿಚಕ್ರ ವಾಹನಗಳಲ್ಲಿ ಘೋಷಣೆಗಳನ್ನು ಜಯಕಾರವನ್ನು ಹಾಕುತ್ತಾ ಮೆರವಣಿಗೆ ನಡೆಸಿದರು.ಹಾಗೂ ಶನಿಮಹಾತ್ಮ ದೇವಸ್ಥಾನದ ವೃತ್ತದಲ್ಲಿ ಸಿಹಿ ಹಂಚಿ
ಸಂಭ್ರಿಸಿದರು.
ಇದಕ್ಕೂ ಮುಂಚೆ ಕೆಲ ಮಾಧ್ಯಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ತಿಮ್ಮರಾಯಪ್ಪ ಗೆಲವು ಸಾಧಿಸಿದ್ದಾರೆ ಎಂದು ಬಿತ್ತರಿಸಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಿಸಿದ್ದು ನಂತರ
ವೆಂಕಟರಮಣಪ್ಪ ಅಯ್ಕೆ ಘೋಷಣೆಯಾಗಿದೆ ಎಂಬ ಸುದ್ದಿ ತಿಳಿದುನಿರಾಶರಾದರು.ಬೆಳಿಗಿನಿಂದಲೂ ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಒಂದು ರೀತಿಯ ಟೆನ್ಷನ್ ಗೆ ಒಳಗಾಗಿದ್ದ ಕಾರ್ಯಕರ್ತರು ಕಾಂಗ್ರೆಸ್ ಮುನ್ನಡೆ
ಮತ್ತೊಮ್ಮೆ ಜೆಡಿಎಸ್ ಮುನ್ನಡೆಯ ಸುದ್ದಿ ಬಿತ್ತರ ವಾಗುತ್ತಿದ್ದಂತೆ ಕಾರ್ಯಕರ್ತರು ತಮ್ಮ ಅಸಹನೆ ಯನ್ನು ತೋರ್ಪಡಿಸುತ್ತಾ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಅಂತಿಮ ಕ್ಷಣದಲ್ಲಿ ಮಾಧ್ಯಮ ಗಳಲ್ಲಿ ಬಿತ್ತರವಾದ ಸುದ್ದಿ ಜೆಡಿಎಸ್ ಪಕ್ಷದವರಲ್ಲಿ ನವಚೈತನ್ಯ ನೀಡಿದರೆ ಆನಂತರ ಬಿತ್ತರವಾದ ಸುದ್ದಿ ಕಾಂಗ್ರೆಸ್
ಪಕ್ಷ ಜಯಭೇರಿ ಬಾರಿಸುವಂತೆ ಮಾಡಿತು.

LEAVE A REPLY

Please enter your comment!
Please enter your name here