ಸಂಸದನ ಪುತ್ರನ ಪುಂಡಾಟ

0
314

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಟೋಲ್ ನಲ್ಲಿ ವಾಹನ ಬಿಡದ ಹಿನ್ನೆಲೆ- ಟೋಲ್ ಗೇಟ್ ನಲ್ಲಿ ಆಂಧ್ರಪ್ರದೇಶದ ಸಂಸದನ ಪುತ್ರ ಮತ್ತವನ ಬೆಂಬಲಿಗರ ಪ್ರತಾಪ- ಆಂಧ್ರದ ಹಿಂದೂಪುರ ಸಂಸದ ನಿಮ್ಮಲ ಕೃಷ್ಣಪ್ಪ ಮಗ ಅಂಬರೀಶ್ ಮತ್ತವರ ಬೆಂಬಲಿಗರಿಂದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯ ರಾಷ್ಟ್ರೀಯ ಹೆದ್ದಾರಿ ಏಳರಲ್ಲಿರುವ ಟೋಲ್ ಪ್ಲಾಜಾ ಮೇಲೆ ದಾಳಿ, ಗಾಜುಗಳು ಪುಡಿ ಪುಡಿ- ತಂದೆಯ ಜೊತೆ ಆಂಧ್ರಪ್ರದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಘಟನೆ- ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರ ಭೇಟಿ ಪರಿಶೀಲನೆ- ಉಭಯರನ್ನ ಸಮಾಧಾನಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು.ಈ ಹಿಂದೆಯೇ ಬಾಗೇಪಲ್ಲಿ ಟೋಲ್ ಪ್ಲಾಜಾ ಮೇಲೆ ಸಂಸದ ನಿಮ್ಮಲ ಕೃಷ್ಣಪ್ಪ ಮತ್ತವರ ಬೆಂಬಲಿಗರು ದಾಳಿ ನಡೆಸಿದ್ದರು.ಟೋಲ್ ನಿದೇ್ಶಕ ಉದಯ್ ಸಿಂಗ್ ಮಾತನಾಡಿ ಒಬ್ಬ ಸಂಸದ ನ ಮಗ ನಾಗಿ ಈ ರೀತಿಯ ಗೂಡಾಂಗಿರಿ ಮತ್ತು ಹಲ್ಲೆ ಮಾಡಿರುವುದು ತಪ್ಪಾಗಿದೆ ಯಾವುದೇ ಜನಪ್ರತಿನಿಧಿಯಾದರು ಕಾನೂನು ರೀತ್ಯಾ ಕ್ರಮಗಳನ್ನು ತೆಗೆದುಕೊಳ್ಳುತ್ತೃವೆ ಈ ಬಗ್ಗೆ ಬಾಗೇಪಲ್ಲಿ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.ಟೋಲ್ ಸಿಬ್ಬಂದಿ ಗಳಾದ ಸುರೇಶ, ರಾಮಕ್ರಷ್ಣ, ಶೆಟ್ಟಿ, ನಟರಾಜು, ನಾಗೇಶ್ ಇತರರ ಮೇಲೆ ಹಲ್ಲೆ ಮಾಡಲಾಗಿದೆ.

LEAVE A REPLY

Please enter your comment!
Please enter your name here