ಸಂಸ್ಕೃತಿ ವೈಭವ ಮತ್ತು ಹಸಿರು ಜಾಥ ಕಾರ್ಯಕ್ರಮ…

0
115

ಬಳ್ಳಾರಿ /ಹೊಸಪೇಟೆ :ಮರಿಯಮ್ಮನಹಳ್ಳಿ : ಮನುಷ್ಯನ ಶುದ್ದಿಗಾಗಿ ಸಂಸ್ಕೃತಿ ಮತ್ತು ಸಂಸ್ಕಾರ ಮುಖ್ಯವಾಗಿ ಬೇಕು ಎಂದು ತಿಂಥಿಣಿ ಬ್ರೀಜ್ ನ ಹಾಲುಮತ ಪೀಠದ ಸಿದ್ದರಾಮಾನಂದಪುರಿ ಸ್ವಾಮಿ ಜಿ ಕರೆನೀಡಿದರು .ಅವರು ಬುದವಾರ ಸಮೀಪದ ಅಯ್ಯನಹಳ್ಳಿ ಗ್ರಾಮದಲ್ಲಿ ಹಾಲುಮತ ಸಂಸ್ಕೃತಿ ವೈಭವ ಮತ್ತು ಹಸಿರು ಜಾಥ ಕಾರ್ಯಕ್ರಮ ದ ಸಾನಿದ್ಯ ವಹಿಸಿ ಆರ್ಶಿವಚನ ನೀಡಿದರು, ಮನುಷ್ಯ ರಾದವರು ತಮಗೋಸ್ಕರ ಬದುಕುವುದಕ್ಕಿಂತ , ಪರರಿಗೋಸ್ಕರ ಕೂಡ ಬದುಕಬೇಕು .ಪರರಿಗೆ ದಾನ -ಸಹಾಯ ಮಾಡುವುದರಿಂದ ಜನ್ಮಸಾರ್ಥಕವಾಗುತ್ತದೆ .ಅಲ್ಲದೆ ಪರಧರ್ಮ ಸಹಿಷ್ಣುತೆ ಅಳವಡಿಸಿ ಕೊಂಡು ಮಾನವ ಸಹಜೀವನ ನಡೆಸಿ ಸಾರ್ಥಕ ತೆ ಪಡೆಯಿರಿ .ಪ್ರತಿಯೊಬ್ಬರೂ ಶಿಕ್ಷಣ ವಂತರಾಗಿದ್ದೆಯಾದರೆ ಮೋಸ , ವಂಚನೆಗೊಳಗಾಗುವುದರಿಂದ ಪಾರಾಗಬಹುದು , ಅಲ್ಲದೆ ನಮಗೆ ವಿವೇಚನೆ , ಆಚರಣೆ , ಸಂಸ್ಕಾರ ಗಳು ಪ್ರಾಣಿ ಗಳಿಗಿಂತ ಮನುಷ್ಯ ರಿಗೆ ಮುಖ್ಯ ಎಂದರು . ಇಂದು ಮನುಷ್ಯನ ಸ್ವಾರ್ಥದಿಂದ ಪರಿಸರ ಅಸಮತೋಲನ ಉಂಟಾಗಿ ಜಾಗತಿಕ ತಾಪಮಾನ ಅಧಿಕವಾಗಿ , ಅನೇಕ ವೈಪರಿತ್ಯಗಳು ಉಂಟಾಗುತ್ತಿವೆ , ಇದರಿಂದ ಪಾರಾಗಲು ಹೊಲ – ಗದ್ದೆಗಳಲ್ಲಿ , ಶಾಲಾವರಣಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರ ಕ್ಕೆ ಕೊಡುಗೆನೀಡಬೇಕಿದೆ ಎಂದು ಸಲಹೆಮಾಡಿದರು . ಹಾಲುಮತ ಸಮಾಜದ ಮುಖಂಡ ಕುರಿ ಶಿವಮೂರ್ತಿ ಮಾತನಾಡಿದರು , ಈ ಸಂದರ್ಭದಲ್ಲಿ ಗೋಣ್ಯಪ್ಪ , ಈ. ನಾಗರಾಜ , ಚೌಟಗಿ ಬಸವರಾಜ ,ಅಂಬಣ್ಣ , ಪಕ್ಕೀರಪ್ಪ , ಅಂಜಿನಪ್ಪ , ಕುರಿ ಪಂಪಾಪತಿ , ಕೆ . ಜಗದೀಶ್ , ರಾಯಪ್ಪ , ಸಕ್ರಪ್ಪ , ಹನುಮಂತ ಪ್ಪ , ಹುಲುಗಪ್ಪ ಇತರರಿದ್ದರು.

LEAVE A REPLY

Please enter your comment!
Please enter your name here