ಸಕ್ಕರೆ ಫ್ಯಾಕ್ಟರಿ ಅವಾಂತರ,ನೀರು,ಬೆಳೆಗಳು ಹಾನಿ..

0
157

ವಿಜಯಪುರ/ಸಿಂದಗಿ:ಅದೇನೋ ಅಂತಾರಲ್ಲ ಗೆದ್ದಲು ಮಾಡಿದ ಮನೆಯಲ್ಲಿ ಹಾವು ಬಂದು ವಾಸಿಸುತ್ತಿತ್ತು ಅಂತ….ಹಾಗಾಗಿದೆ ವಿಜಯಪುರ ಜಿಲ್ಲೆಯ ಸಕ್ಕರೆ ಕಾರ್ಖಾನೆ ಮಾಡಿದ ಯಡವಟ್ಟು. ಹೌದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಆಲಮೇಲ ಬಳಿ ಇರುವ ಕೆಪಿಆರ್ ಸಕ್ಕರೆ ಕಾರ್ಖಾನೆ ಅವಾಂತರದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲುವೆಗೆ ಕಾರ್ಖಾನೆ ತ್ಯಾಜ್ಯ ನೀರು ಬಂದ ಪರಿಣಾಮ ರೈತರ ಬೆಳೆಗಳು ನಷ್ಟ ಉಂಟಾಗುತ್ತಿದೆ. ಹಲವಾರು ಬಾರಿ ಮನವಿ ಮಾಡಿದ್ರೂ ಸಹ ಅನ್ನದಾತರ ಮೇಲೆ ಕೆಪಿಆರ್ ಸಕ್ಕರೆ ಕಾರ್ಖಾನೆ ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ. ನೀರು ಬಿಡಬೇಡಿ ಅಂದರೂ ಸಹ ಬೆಳೆಗಳಿಗೆ ಮಾರಕವಾದ ಕಾರ್ಖಾನೆ ಕೆಮಿಕಲ್ ಮಿಕ್ಸ್ ನೀರನ್ನು ಕಾಲುವೆಗೆ ಹರಿಬಿಟ್ಟದ್ದಾರೆ ಅಧಿಕಾರಿಗಳು. ತಮಿಳುನಾಡಿನ ಮೂಲದ ಕೆಪಿಆರ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಬೇಜವಾಬ್ದಾರಿಯಿಂದ ಈ ಘಟನೆ ನಡೆದಿದ್ದು, ಆಲಮೆಲ ಭಾಗದಲ್ಲಿ ರೈತರ ಜೋಳದ ಹಾಗೂ ಕಬ್ಬಿನ ಬೆಳೆಗಳಿಗೆ ನುಗ್ಗಿದ ಕಾರ್ಖಾನೆಯ ಹೆಚ್ಚುವರಿ ನೀರು. ಕಾಲುವೆ ಮುಖಾಂತರ ರೈತರ ಜಮಿನುಗಳಿಗೆ ಹೋದ ಪರಿಣಾಮ ಸುಮಾರು 10 ಎಕರೆ ಜಮೀನಲ್ಲಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. ಕಳೆದ 4 ವರ್ಷಗಳಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹತ್ತಾರು ಬಾರಿ ಕಾರ್ಖಾನೆ ಅಧಿಕಾರಿಗಳಿಗೆ ತಿಳಿಸಿದ್ರು ಕ್ರಮ ತೆಗೆದು ಕೊಳ್ಳದ ಬೇಜವಾಬ್ದಾರಿಯುತ್ತವಾಗಿದೆ ವರ್ತಿಸುತ್ತಿದ್ದಾರೆ. ಸಾಲಮಾಡಿ ಬೆಳೆದ ಬೆಳೆ ಹಾನಿಗೊಳಗಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ…

ಬೈಟ್-01: ಮಾಳಪ್ಪ ಪೂಜಾರಿ(ರೈತ)
ಬೈಟ್-02: ಶಿವವಾನಂದ ಕಲ್ಲೂರ(ರೈತ)

ವರದಿ: ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ

LEAVE A REPLY

Please enter your comment!
Please enter your name here