ಸಚಿವರಿಂದ ರೈತರ ಬೇಡಿಕೆ ಈಡೇರಿಸುವ ಭರವಸೆ

0
152

ಬಳ್ಳಾರಿ/ಹೊಸಪೇಟೆ: ಭಗರ್ ಹುಕಂ ಹಾಗೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡುವುದು ಸೇರಿ ವಿವಿಧ ಬೇಡಿಕೆಗಾಗಿ ತಹಶೀಲ್ದಾರ ಕಚೇರಿ ಮುಂದೆ ಕಳೆದ ಹತ್ತು ದಿನಗಳಿಂದ ಧರಣಿ ಕುಳಿತ ರೈತರನ್ನು ಭಾನುವಾರ ಭೇಟಿ ಮಾಡಿದ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ನೇತೃತ್ವದಲ್ಲಿ ತಾಲ್ಲೂಕಿನ ರೈತರು, ಅನಿರ್ಧಿಷ್ಟಾವದಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ತಾಲ್ಲೂಕಿನ ನೂರಾರು ರೈತರು ಸಾಗುವಳಿ ಮಾಡುತ್ತಿದ್ದ ಭಗರ್ ಹುಕುಂ ಮತ್ತು ಅರಣ್ಯ ಭೂಮಿಗಳಿಗೆ ಪಟ್ಟಾ ನೀಡುವುದು ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡ ಹೊಸಪೇಟೆ ತಾಲ್ಲೂಕಿನ ನೂರಾರು ರೈತರು ಕಮಲಾಪುರ ಗ್ರಾಮದಿಂದ ಪಾದಯಾತ್ರೆಮಾಡುವ ಮುಖಾಂತರ ತಹಸಿಲ್ದಾರ್ ಕಛೇರಿಯ ಮುಂದೆ ಧರಣಿಗೆ ಕುಳಿತು ಹತ್ತು ದಿನಗಳೇ ಕಳೆದಿದ್ವು, ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸಂಭಂದಪಟ್ಟ ಅಧಿಕಾರಿಗಳೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ರೈತರ ಬೇಡಿಕೆಗಳನ್ನ ಈಡೇರಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ಕಾನೂನಿನ ವ್ಯೆವಸ್ಥೆಯಲ್ಲಿ ಇರುವ ಸಾದ್ಯೆತೆಗಳನ್ನ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗೆ ನ್ಯಾಯ ಒದಗಿಸುವ ಭರವಸೆಯನ್ನ ಸಹ ನೀಡಿ ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ತಹಸಿಲ್ದಾರ ಹೆಚ್.ವಿಶ್ವನಾಥ ಮತ್ತು ಉಪವಿಭಾಗಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ರೈತರ ಸಮಸ್ಯೆಯನ್ನ ಬಗೆಹರಿಸಿಕೊಡುವಂತೆ ಸೂಚಿಸಿದರು.
ಅಲ್ಲದೆ ಅಧಿಕಾರಿಗಳಿಂದ ಈ ಕೆಲಸ ಆಗದಿದ್ರೆ ಸಂಭಂದಪಟ್ಟ ಇಲಾಖೆಯ ಸಚಿವರ ಗಮನಕ್ಕೆ ತಂದು ರೈತರ ಬೇಡಿಕೆಗಳನ್ನ ಪೂರೈಸುವ ಭರವಸೆಯನ್ನ ಸಹ ನೀಡಿದ್ರು,ಇನ್ನು ಕಳೆದ ಹತ್ತು ದಿನಗಳಿಂದ ನಿರಂತರವಾಗಿ ತಹಸಿಲ್ದಾರ್ ಕಛೇರಿಯ ಮುಂದೆ ಧರಣಿ ಕುಳಿತು ಹೋರಾಟ ನಡೆಸುತ್ತಿದ್ದ ರೈತರು ಸಚಿವರ ಭರವಸೆಯಿಂದ ಇಂದಿಗೆ ತಮ್ಮ ಹೋರಾಟವನ್ನ ಮೊಟಕುಗೊಳಿಸಿ ನ್ಯಾಯ ಸಿಗುವ ಭರವಸೆ ವ್ಯೆಕ್ತ ಪಡಿಸಿದರು. ಸಚಿವರ ಭರವಸೆ ಮೇರೆಗೆ ರೈತರು, ತಾತ್ಕಾಲಿಕವಾಗಿ ಧರಣಿಯನ್ನು ಕೈ ಬಿಟ್ಟರು.

LEAVE A REPLY

Please enter your comment!
Please enter your name here