ಸಚಿವರ ಕಛೇರಿ ಉದ್ಘಾಟನೆ.

0
188

ಚಾಮರಾಜನಗರ/ ಕೊಳ್ಳೇಗಾಲ:ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅವರು ತಮ್ಮ ಕ್ಷೇತ್ರವಾದ ಕೊಳ್ಳೇಗಾಲದ ತಾಲ್ಲೂಕು ಪಂಚಾಯಿತಿಯಲ್ಲಿ ಇಂದು ತಮ್ಮ ನೂತನ ಕಛೇರಿಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು
ಕ್ಷೇತ್ರದ ಜನತೆ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಮಾಡ ಬೇಕಾಗಿರುವುದರಿಂದ . ನಾನು ವಾರದಲ್ಲಿ ಎರಡರಿಂದ ಮೂರು ದಿನ ಶಾಸಕರ ಕಛೇರಿಯಲ್ಲಿ ಲಭ್ಯವಿದ್ದು ಜನರ ಸಮಸ್ಯೆಯನ್ನು ಆಲಿಸುತ್ತೇನೆ.ಪ್ರತಿ ದಿನ ಬೆಳಗ್ಗೆ 10 ಗಂಟೆ ಯಿಂದ ಸಾಯಂಕಾಲ 6 ಗಂಟೆಯವರೆಗೂ ಕಛೇರಿ ತೆರೆದಿರುತ್ತದೆ.
ನನ್ನ ಅಧಿಕೃತ ಕಛೇರಿಯಲ್ಲಿ ಒಬ್ಬ ಕಂಪೂಟರ್ ಆಪರೇಟರ್ ಮತ್ತು ಸಹಾಯಕ ಕಾರ್ಯ ನಿರ್ವಹಿಸುತ್ತಾರೆ. ಕೊಳ್ಳೇಗಾಲ ಬ್ಲಾಕ್ ನ ಎಲ್ಲಾ ಅಹವಾಲುಗಳನ್ನು ಇಲ್ಲಿ ಸ್ವೀಕಾರ ಮಾಡಲಾಗುತ್ತದೆ. ಸ್ವೀಕರಿಸಿದ ಅಹವಾಲುಗಳಿಗೆ ಕೂಡಲೇ ಸ್ಪಂದಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಹರಿರಾಮ್, ತಮಿಳು ನಾಡಿನ ಜಿಲ್ಲಾ ಉಸ್ತುವಾರಿ ಶ್ರೀನಿವಾಸ್,
ಟೌನ್ ಅಧ್ಯಕ್ಷ ಜಕಾವುಲ್ಲಾ, ನಗರಸಭೆ ಸದಸ್ಯ ರಾಮಕೃಷ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here