ಸಚಿವಸ್ಥಾನಕ್ಕಾಗಿ ವಿಶೇಷ ಪೂಜೆ…

0
76

ವಿಜಯಪುರ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ವಿಜಯಪುರದ ಬಬಲೇಶ್ವರ ಶಾಸಕ ಹಾಗೂ ಮಾಜಿ ಸಚಿವ ಎಂ.ಬಿ. ಪಾಟೀಲಗೆ ಸಚಿವ ಸ್ಥಾನ ನೀಡಲು ಎಂ.ಬಿ. ಪಾಟೀಲ ಅಭಿಮಾನಿಗಳು ವಿಶೇಷ ಸಂಕಲ್ಪ ಪೂಜೆ ನೆರೆವೇರಿಸಿದರು. ವಿಜಯಪುರ ನಗರದ ಶ್ರೀಸುಂದರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿದರು. ಇನ್ನು ಎಂ.ಬಿ. ಪಾಟೀಲ ಅವರಿಗೆ ಸಚಿವ ಸಿಗಲಿ ಎಂದು ಶಿವನಿಗೆ 21 ಲೀ. ಕ್ಷೀರಾಭಿಷೇಕ, 21 ಟೆಂಗಿನಕಾಯಿ ಒಡೆದು‌ ವಿಶೇಷ ಪ್ರಾರ್ಥನೆ ಮಾಡಿದರು. ಇನ್ನು ಜಂಗಮ ಸಮಾಜದ ಮುಖಂಡ ಸೋಮು ಗಣಾಚಾರಿ ನೇತೃತ್ವದಲ್ಲಿ ಈ ರುದ್ರಾಭಿಷೇಕ ಬೆಳಗ್ಗೆ 6.30 ರಿಂದ 8.45ರ ವರೆಗೆ ನಡೆಯಿತು.

ವರದಿ: ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here