ಸಚಿವೆ ಉಮಾಶ್ರೀಗೆ ತವರು ನೆಲದಲ್ಲೇ ಜನ್ರ ಚುನಾವಣೆ ಬಹಿಷ್ಕಾರ ಬಿಸಿ…!?

0
138

ಬಾಗಲಕೋಟೆ/ ತೆರದಾಳ :ಸರ್ಕಾರ ಮೂಲಭೂತ ಸೌಲಭ್ಯಕ್ಕಾಗಿ ಪ್ರತಿವರ್ಷ ಕೋಟಿ ಗಟ್ಟಲೆ ಖರ್ಚು ಮಾಡುತ್ತೇ, ಆದ್ರೆ ಇಲ್ಲೊಂದು ಬಡಾವಣೆ ಕಳೆದ 15 ವರ್ಷಗಳಿಂದ ಮಹಿಳ ೆಯರಿಗೆ ಶೌಚಾಲಯ ಸೇರಿದಂತೆ ನೀರು, ರಸ್ತೆ ಹೀಗೆ ಒಂದೇ ಎರಡೇ ಯಾವುದೂ ಸರಿಯಾಗಿ ಸಿಗ್ತಿಲ್ಲ. ಹೀಗಾಗಿ ಬಿಜೆಪಿ, ಕಾಂಗ್ರೆಸ್​ ಜನಪ್ರತಿನಿಧಿ ಗಳ ವಿರುದ್ಧ ಗರಂ ಆಗಿರೋ ಜನ ಸಮಸ್ಯೆ ಬಗೆ ಹರಿಯದೇ ಹೋದ್ರೆ ಈ ಬಾರಿಯ ಚುನಾವಣೆ ಬಹಿಷ್ಕರಿಸೋಕೆ ಮುಂದಾಗಿದ್ದಾರೆ. ಇದ್ರಿಂದ ಸ್ಥಳೀಯ ಶಾಸಕಿ, ಸಚಿವೆ ಉಮಾಶ್ರೀಗೆ ಸ್ವಕ್ಷೇತ್ರ ದಲ್ಲೇ ಚುನಾವಣೆ ಬಹಿಷ್ಕಾರದ ಬಿಸಿ ಎದುರಿಸು ವಂತಾಗಿದೆ.

ಇಂತಹವೊಂದು ಪರಿಸ್ಥಿತಿ ಎದುರಾಗಿರೋದು ಬೇರೆಲ್ಲೂ ಅಲ್ಲ. ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ತವರು ನೆಲವಾಗಿರೋ ತೇರದಾಳ ಪಟ್ಟಣದಲ್ಲಿ. ಪಟ್ಟಣದ ಹೊರವಲಯದಲ್ಲಿರೋ ಕಲೂತಿ ನಗರ ನಿರ್ಮಾಣವಾಗಿದ್ದು 2003ರಲ್ಲಿ. ಅಂದಾಜು 500 ಮನೆಗಳನ್ನ ಅಂದು ನಿರ್ಮಾಣ ಮಾಡಿದ್ರೂ ಸಹ ಕೇವಲ 50 ಜನ್ರಿಗೆ ಮನೆ ನೀಡಲಾಗಿತ್ತು. ಆದ್ರೆ ಮುಂದೆ ಬಂದಂತೆ ಕಾಂಗ್ರೆಸ್​ ಮತ್ತು ಬಿಜೆಪಿ ಶಾಸಕರು ಇಲ್ಲಿಂದ ಆಯ್ಕೆಯಾದ್ರೂ ಯಾರೂ ಸಹ ಇವರ ಗೋಳು ಕೇಳ್ತಿಲ್ಲ. ರಾತ್ರಿಯಾದ್ರೆ ಸಾಕು ಮಹಿಳೆಯರು ಜೀವ ಕೈಯಲ್ಲಿ ಹಿಡಿದು ಶೌಚಾಲಯಕ್ಕೆ ಹೋಗೋ ಪರಿಸ್ಥಿತಿ. ಮೂಲಭೂತ ಸೌಲಭ್ಯಗಳಿಲ್ಲಿ ಮರೀಚಿಕೆ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ರೂ ಯಾರೂ ಕೇಳ್ತಿಲ್ಲ. ಹೀಗಾಗಿ ಇನ್ನೆರಡ್ಮೂರು ತಿಂಗಳಲ್ಲಿ ಸಮಸ್ಯೆ ಬಗೆ ಹರಿಸದೇ ಹೋದ್ರೆ ವಿಧಾನಸಭಾ ಚುನಾವಣೆಯನ್ನೇ ಬಹಿಷ್ಕರಿಸೋಕೆ ಇಲ್ಲಿನ ಜನ ಮುಂದಾಗಿದ್ದಾರೆ.

ಇತ್ತ ಬೃಹತ್ ನೀರಿನ ಟ್ಯಾಂಕ್​ ಕಟ್ಟಿಸಿ ವರ್ಷಗಳೇ ಕಳೆದ್ರೂ ಹನಿ ನೀರಿಲ್ಲ, ಇತ್ತ ನಲ್ಲಿ ಇದ್ರೂ ನೀರು ಬರಲ್ಲ. ತಿಂಗಳಿಗೊಮ್ಮೆ ನೀರು ಬರುತ್ತಿದ್ದು, ರಸ್ತೆಗಳು ಹದೆಗೆಟ್ಟು ಹೋಗಿವೆ. ಈ ಮಧ್ಯೆ ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಸ್ಥಳೀಯ ಪುರಸಭೆಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಧ್ಯೆ ಪ್ರತಿ ಮನೆಯವರು 500 ರೂಪಾಯಿಯಂತೆ ಹೌಸಿಂಗ್​ ಬೋರ್ಡಗೆ ಹಣ ಕಟ್ಟಿದ್ರೂ ಕ್ಯಾರೆ ಅಂದಿಲ್ಲವಂತೆ. ಇದ್ರಿಂದ ಅತಂತ್ರವಾಗಿರೋ ಜನ್ರು ಇದೀಗ ಚುನಾವಣೆಯನ್ನ ಬಹಿಷ್ಕರಿಸಿ ಜನಪ್ರತಿನಿಧಿಗಳಿಗೆ ಪಾಠ ಕಲಿಸೋಕೆ ಮುಂದಾಗಿದ್ದಾರೆ.
ಬೈಟ್:- ರಾಹುಲ್

LEAVE A REPLY

Please enter your comment!
Please enter your name here