ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ..

0
150

ಚಾಮರಾಜನಗರ/ಕೊಳ್ಳೇಗಾಲ:ಭಾರತದ ಸಂವಿಧಾನದ ಹಾಗೂ ದಲಿತ, ಅಲ್ಪಸಂಖ್ಯಾತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಡಾ.ಬಿಆರ್.ಅಂಬೇಡ್ಕರ್ ಸ್ಮಾರಕ ಸಂಘ,ಮುಸ್ಲಿಂ ಸಂಘಟನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಂ.ಜಿ.ಎಸ್.ವಿ.ಕಾಲೇಜು ಮೈದಾನದಲ್ಲಿ ಡಾ.ಬಿಆರ್.ಅಂಬೇಡ್ಕರ್ ಸ್ಮಾರಕ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು, ಕಾಲೇಜು ವಿದ್ಯಾರ್ಥಿಗಳು ಸಮಾವೇಶಗೊಂಡು ಗುರುಕಾರ್ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮಾರ್ಗವಾಗಿ ಮೆರವಣಿಗೆ ಹೊರಟು ಎಡಿಬಿ ವೃತ್ತದಲ್ಲಿ ಅನಂತ್ ಕುಮಾರ್ ಹೆಗಡೆ ಪ್ರತಿಕೃತಿಗೆ ಚಪ್ಪಲಿಯಲ್ಲಿ ಹೊಡೆದು ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತೀಯ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠ ಹಾಗೂ ಬೃಹತ್‌ ಸಂವಿಧಾನವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ಸಮಾನತೆ, ಭ್ರತೃತ್ವ,ಸಹೋದರತ್ವ ,ಜಾತ್ಯತೀತ ಮೌಲ್ಯಗಳನ್ನು ಒಳಗೊಂಡಿರುವ ಭಾರತೀಯ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಇಂಥ ಶ್ರೇಷ್ಠ ಸಂವಿಧಾನವನ್ನ ಕೇಂದ್ರದಲ್ಲಿ ಉನ್ನತ ಸ್ಥಾನದಲ್ಲಿರುವ ಅನಂತ್ ಕುಮಾರ್ ಹೆಗಡೆಯವರು ಸಂವಿಧಾನವನ್ನೇ ಬದಲಾಯಿಸುವುದಕ್ಕಾಗಿ ನಾವು ಅಧೀಕಾರಕ್ಕೆ ಬಂದಿದ್ದೇವೆ ಎಂದು ಹೇಳಿಕೆ ನೀಡಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾರಕವಾದುದ್ದು ಇಂತಹ ಆವಹೇಳನೆಕಾರಿ ಮಾತುಗಳನ್ನು ಹೇಳುತ್ತಾ ದೇಶದಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತುತ್ತ, ಸಮಾಜದ ಶಾಂತಿ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತಿರುವ ಸಚಿವರನ್ನೂ ಕೇಂದ್ರ ಸಂಪೂಟದಿಂದ ಕೈಬಿಡಬೇಕು
ಇಲ್ಲವಾದಲ್ಲಿ ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ರಾಜಿನಾಮೆ ಪಡೆಯಬೇಕು ಎಂದು ಧಿಕ್ಕಾರ ಕೂಗಿದರು.
ಪ್ರತಿಭಟನೆಯಲ್ಲಿ ಡಾ.ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ನಟರಾಜು ,ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಪುಟ್ಟಬುದ್ದಿ ,ಪದಾಧಿಕಾರಿಗಳಾದ ನಟರಾಜುಮಾಳಿಗೆ,ಚಂದು,ರಾಜಶೇಖರ ಮೂರ್ತಿ,
ನಗರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ,ಸದಸ್ಯರಾದ ಅಕಮ್ಮಲ್,ರಮೇಶ್ ,ಜಯಕರ್ನಾಟಕ ಪ್ರಭುಸ್ವಾಮಿ,ಲಂಚ ಮುಕ್ತ ವೇದಿಕೆ ಯ ಮೋಹನ್, ಕಿರಣ್,ನಂಜುಂಡಸ್ವಾಮಿ, ಮುಸ್ತಾಕ್, ಪಾಷ ,ಆರೀಫ್,ಅನ್ಸರ್ ,ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಎಸ್.ಸಿ ಎಸ್.ಟಿ ಗುತ್ತಿಗೆದಾರರ ಸಂಘದ ಪುಟ್ಟಸ್ವಾಮಿ, ಸಿದ್ದರಾಜು, ಶಿವಶಂಕರ್, ಲೋಕೇಶ್, ಕೆಂಪರಾಜು, ಡಿ.ಎಸ್.ಎಸ್.ಜಿಲ್ಲಾ ಸಂಚಾಲಕ ಆಲ್ದೂರು ನಾಗೇಂದ್ರ, ವರದರಾಜು, ಗುರು, ದಿಲೀಪ್, ರೈತಸಂಘದ ಶೈಲೇಂದ್ರ, ಯುವಶಕ್ತಿ ವೇದಿಕೆ ಸಿದ್ದಪ್ಪಾಜಿ, ಹಾಗೂ ಹಲವು ಗ್ರಾಮದ ಮುಖಂಡರು ಗಳು, ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here