ಸಡಗರ ಸಂಭ್ರಮದ ಜೋಡಿ ರಥೋತ್ಸವ.

0
150

ಬಳ್ಳಾರಿ ಹೊಸಪೇಟೆ:ಐತಿಹಾಸಿಕ ಹಂಪಿ ವಿರೂಪಾಕ್ಷೇಶರ ಸ್ವಾಮಿ ಹಾಗೂ ಚಂದ್ರಮೌಳೀಶ್ವರ ಸ್ವಾಮಿಯ ಜೋಡಿ ರಥೋತ್ಸವವು ಸಂಭ್ರಮ, ಸಡಗರದಿಂದ ಮಂಗಳವಾರ ನೆರವೇರಿತು., ಐತಿಹಾಸಿಕ ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು.
ಜಾತ್ರಾ ಮಹೋತ್ಸವದ ಅಂಗವಾಗಿ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಪಂಪಾಂಭಿಕೆ ದೇವಿಗೆ ವಿಶೇಷ ಪೂಜೆ, ಅಭಿಷೇಕ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆನಿಂದಲೇ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದರ್ಶನ ಪಡೆದರು.
ಬ್ರಹ್ಮರಥೋತ್ಸವದ ನಿಮಿತ್ತ ರಥ ಬೀದಿಯ ಎದುರು ಬಸವಣ್ಣನ ಬೃಹತ್ ಪ್ರತಿಮೆಗೆ ಬೆಳಗ್ಗೆ ಎಣ್ಣೆ ಮಜ್ಜನ, ಕ್ಷೀರಾಭಿಷೇಕ ಪೂಜೆ ನಡೆಯಿತು. ವಿರೂಪಾಕ್ಷನಿಗೆ ಎದುರು  ರಥ ಬೀದಿಯ ಬೆಟ್ಟದ ಶಿಲಾ ಮಂಟಪದಲ್ಲಿ 15 ಅಡಿಗೂ ಎತ್ತರರದ ಬಸವಣ್ಣ ಸುಂದರ ಶಿಲಾ ಮೂರ್ತಿಯನ್ನು ಕೆತ್ತಲಾಗಿದ್ದು, ಪ್ರವಾಸಿಗರ ಮುಖ್ಯ ಆಕರ್ಷಣೀಯ ಕೇಂದ್ರ ಬಿಂಧುವಾಗಿದೆ.
ಸಂಜೆ ರಥೋತ್ಸವದ ವೇಳೆಗೆ ಪ್ರೌಢದೇವರಾಯ ನೀಡಿದ್ದ ರತ್ನಖಚಿತ ಸ್ವರ್ಣ ಕಿರೀಟ ಹಾಗೂ ಧಿರಿಸು ಧರಿಸಿದ್ದ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮಿಗಳನ್ನು ಮಠದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ವಿರೂಪಾಕ್ಷ ಸ್ವಾಮಿ ಹಾಗೂ ಚಂದ್ರಮೌಳೀಶ್ವರ ಸ್ವಾಮಿಯ ಜೋಡು ರಥೋತ್ಸವವು ವಿರೂಪಾಕ್ಷ ಬಜಾರ್‌ದಲ್ಲಿ ಜಯಘೋಷಗಳ ಮೂಲಕ ಸಾಗಿ ಬಂತು. ನೆರೆದಿದ್ದ ಸಾವಿರಾರು ಭಕ್ತರು ಜಯಘೋಷದೊಂದಿಗೆ ಹೂವು, ಹಣ್ಣು ಎಸೆದು ಭಕ್ತಿಭಾವ ಪ್ರದರ್ಶಿಸಿದರು.
ಬೆಳಿಗ್ಗೆ 9-30ಕ್ಕೆ ಪೂರ್ಣಾಹುತಿ ವಸಂತೋತ್ಸವ ನಡೆಯಿತು. ಅಲ್ಲಿ ಚಂದ್ರಮೌಳೇಶ್ವರ ರಥದಲ್ಲಿ ಅಸೀನರಾದ ನಂತರ ಐದು ಹೆಜ್ಜೆ ರಥವನ್ನು ಎಳೆಯಲಾಯಿತು. ಭಾರತಿ ಸ್ವಾಮಿಗಳು ಅಸೀನರಾಗಿದ್ದರು.
ಹಂಪಿ ಜಾತ್ರೆಯ ಅಂಗವಾಗಿ 1509ರಲ್ಲಿ ಶ್ರೀಕಷ್ಣದೇವರಾಯ ಪಟ್ಟಾಭಿಷೇಕ ಸಂದರ್ಭದಲ್ಲಿ ನವರತ್ನ ಖಚಿತ ಸ್ವರ್ಣಮುಖದ ಕಿರೀಟವನ್ನು ವಿರೂಪಾಕ್ಷ ಸ್ವಾಮಿಗೆ ತೊಡಿಸಲಾಗಿತ್ತು.
ರಾಜ್ಯದ ವಿವಿಧ ಭಾಗದಿಂದ ಹಾಗೂ ಹೊರ ರಾಜ್ಯದಿಂದಲೂ ಲಕ್ಷಾಂತರ ಭಕ್ತರು ಈ ಜಾತ್ರೆಯಲ್ಲಿ ಭಾಗವಹಿಸಿದ್ದರು. ಹೊಸಪೇಟೆ ಹಾಗೂ ಕಮಲಾಪುರದ ಏಳು ಕೇರಿ ವಾಲ್ಮೀಕಿ ಸಮಾಜ ಬಾಂಧವರು, ರಥಕ್ಕೆ ಸೊನ್ನೆ ಹಾಕಿದರು.

LEAVE A REPLY

Please enter your comment!
Please enter your name here