ಸದಸ್ಯರ ಆರೋಪ ನಿರಾಧಾರ..!?

0
205

ಬೆಂಗಳೂರು ಗ್ರಾಮತರ/ದೊಡ್ಡಬಳ್ಳಾಪುರ: ಅಧಿಕಾರಿಗಳಿಂದ ನಗರಸಭೆಯ ಕೋಟ್ಯಾಂತರ ರೂಗಳ ಸೋರಿಕೆ ಎಂಬ ಪತ್ರಿಕಾ ಸುದ್ದಿ ಪ್ರಕಟಗೊಂಡ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತ ಬಿಳಿಕೆಂಚಪ್ಪ,ನಗರಸಭಾ ಅಧ್ಯಕ್ಷ ಕೆಬಿ ಮುದ್ದಪ್ಪ ರನೇತೃತ್ವದಲ್ಲಿ ಪತ್ರಿಕಾಗೋಷ್ಟಿ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಆವರು ಸುದ್ದಿ ನಿರಾಧಾರವಾದ್ದು ಕೇವಲ ಬೆರಳೆನಿಕೆಯಷ್ಟು ಸದಸ್ಯರು ರೂಪಿಸಿತ್ತಿರುವ ಷಡ್ಯಂತರ ಎಂದರು. ಪತ್ರಿಕೆಗೆ ಇಲ್ಲಸಲ್ಲದ ಮಾಹಿತಿನೀಡಿ ನಗರಸಭೆ ಆಡಳಿತಕ್ಕೆ ಅಡಚಣೆ ಉಂಟುಮಾಡುತ್ತಿದ್ದಾರೆ ಒಂದು ರೂಪದಲ್ಲಿ ನಗರಸಭೆ ಆದಾಯಕ್ಕೆ ಅಡ್ಡಿ ಪಡೆಸುವುದೇ ಉದ್ದೇಶ ವಿನಹಾ ಅವರ ಆರೋಪ ನಿರಾಧಾರವಾದ್ದು ಎಂದರು. ಅವರ ಆರೋಪಗಳು ಎಲ್ಲಾ ಹುಸಿ ಎನ್ನುವುದಕ್ಕೆ ನಮಲ್ಲಿ ಎಲ್ಲರೀತಿಯ ದಾಖಲೆ ಇವೆ ಎಂದು ಪೂರಕ ದಾಖಲೆಗಳನ್ಮು ಮಾದ್ಯಮದ ಮುಂದೆ ಪ್ರದರ್ಶಿಸಿದರು.ನಗರಸಭೆ ಆಡಳಿತ ಸಕ್ರಮವಾಗಿದೆ ಕರವಸೂಲಿ,ವಾಣಿಜ್ಯಪರವಾನಗಿ ಮತ್ತು ಸ್ವಚ್ಚತೆಯಲ್ಲಿ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲೇ ಮುಂಚೂಣಿಯಲ್ಲಿದೆ ಎಂದ ಅವರು ಉತ್ತಮ ಆಡಳಿತಕ್ಕೆ ಶೀಘ್ರದಲ್ಲೇ ಪ್ರಶಸ್ತಿ ಪಡೆಯಲಿದ್ದೇವೆ ಎಂದು ಹೇಳಿದರು. ಒಂದು ವೇಳೆ ನಗರಸಭೆ ಆದಾಯ ಅಡ್ಡದಾರಿ ಹಿಡಿಸುತ್ತಿರುವ ಅಧಿಕಾರಿಗಳಾಗಲಿ, ಸಿಬ್ಬಂಧಿಗಳ ಮಾಹಿತಿ ದಾಖಲೆಗಳ ಸಮೇತ ಸಾಭೀತು ಪಡೆಸಿದರೇ ಕೂಡಲೇ ಅವರ ಮೇಲೆ ಕಾನೂನು ರೀತಿ ಕ್ರಮ ಜರಿಗಿಸಲಾಗುವುದಾಗಿ ಹೇಳಿದ್ದಾರೆ.

ಸದಸ್ಯರು ತಮ್ಮ ಜವಾಬ್ದಾರಿ ಮರೆತು ಸಂಬಂಧವಿಲ್ಲದ ಮಾಹಿತಿಗಾಗಿ ಸಿಬ್ಬಂಧಿಗೆ ತೊಂದರೆ ಕೊಡುತ್ತಾ ಅದನ್ನೇ ಅವರ ನಿತ್ಯ ಕಾಯಕ ಮಾಡಿಕೊಂಡಿದ್ದಾರೆ, ಮಾಹಿತಿ ನೀಡುವುದು ತಡವಾದರೆ ವಿಷಕುಡಿಯುತ್ತೇನೆಂದು ಬೆದರಿಕೆ ಹಾಕಿ ತಮ್ಮ ಸಣ್ಣತನ ಪ್ರದರ್ಶನಕ್ಕೆ ಮುಂದಾಗಿರುವುದು ಎಸ್ಟುಸರಿ ಎನ್ನುತ್ತಾರೆ.

ನಗರಸಭಾ ಅಧ್ಯಕ್ಷ ಕೆಬಿ.ಮುದ್ದಪ್ಪ, ಉಪಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶ್ ,ಸದಸ್ಯರಾದ ತ,ನ,ಪ್ರಭುದೇವ್, ರಘುರಾಮ್,ಶಿವಶಂಕರ್ ಮತ್ತು ವೆಂಕಟರಾಜು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here