ಸದ್ಭಾವನಾ ಸಮಾವೇಶ

0
216

ಬಳ್ಳಾರಿ /ಹೊಸಪೇಟೆ.ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಮದ್ವಿರೇಶ್ವರ ಶಿವಯೋಗ ಮಂದಿರದಲ್ಲಿ ದಿ.ಸೆ.4 ರಂದು ಸದ್ಭಾವನಾ ಸಮಾವೇಶ ಜರುಗಲಿದೆ.

ಸ್ಥಳೀಯ ಕೊಟ್ಟೂರುಸ್ವಾಮಿ ಮಠದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಕೊಟ್ಟೂರುಸ್ವಾಮಿ ಕಲ್ಯಾಣ ಕೇಂದ್ರ ದ ಕಾರ್ಯದರ್ಶಿ ಸಾಲಿ ಸಿದ್ದಯ್ಯಸ್ವಾಮಿ ಈ ವಿಷಯ ತಿಳಿಸಿದರು.
ವೀರಶೈವ-ಲಿಂಗಾಯತ ಧರ್ಮದ ಸಂಘಟನೆಗಾಗಿ ಗುರುವಿರಕ್ತರ ಹಾಗೂ ಸದ್ಭಕ್ತರ ಸಮಾವೇಶ ಇದಾಗಿದೆ. ಶಿವಯೋಗಮಂದಿರದ ಅಧ್ಯಕ್ಷರಾದ ಡಾ.ಸಂಗನಬಸವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿರಕ್ತರು ಮತ್ತು ಪಂಚಪೀಠದಗಳ ನೇತೃತ್ವದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ಒಂದೇ ವೇದಿಕೆಯಲ್ಲಿ ರಾಜ್ಯದ 800 ಸ್ವಾಮಿಗಳು ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ರಾಜ್ಯದ ಮೂಲೆ-ಮೂಲೆಗಳಿಂದ ಲಕ್ಷಾಂತರ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ. ಹೊಸಪೇಟೆ ಹಾಗೂ ಬಳ್ಳಾರಿ ಜಿಲ್ಲೆಯಿಂದ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಹೊಸಪೇಟೆ ವೀರಶೈವ ಸಮಾಜದ ಅಧ್ಯಕ್ಷ ವಿ.ಶರಣು ಸ್ವಾಮಿ ಮಾತನಾಡಿ, ಸದ್ಭಾವನಾ ಸಮಾವೇಶದಲ್ಲಿ ವೀರಶೈವ-ಲಿಂಗಾಯತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಮಾವೇಶ ಯಶಸ್ವಿಗೊಳಿಸುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಹೊಸಪೇಟೆ ವೀರಶೈವ ಸಮಾಜದ ಕಾರ್ಯದರ್ಶಿ ಕೆ.ರವಿಶಂಕರ್, ಮುಖಂಡರಾದ ಕೆ.ಬಿ.ಶ್ರೀನಿವಾಸ ರೆಡ್ಡಿ, ಎನ್.ಎಸ್.ರೇವಣಸಿದ್ದಪ್ಪ, ಜೆ.ಕಾರ್ತೀಕ್, ಬಿ.ಎಂ.ಸೋಮಶೇಖರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here