ಸನ್ಮಾನ ಕಾರ್ಯಕ್ರಮ…

0
263

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ ಮಕ್ಕಳಿಗೆ ಜಿಕೊ ಬೊಯಿ ಕರಾಟೆ ಡೊ ಪಿಡಿಟೇಷನ್ ಆಫ್ ಇಂಡಿಯಾ ವತಿಯಿಂದ ನಗರದ ದಿ ಕ್ರೇಸೆಂಟ್ ಶಾಲೆಯಲ್ಲಿ ಸನ್ಮಾನ ಕಾರ್ಯಕ್ರಮದಲ್ಲಿ ನೆಹರು ಕ್ರೀಡಾಂಗಣ ಅಭಿವೃದ್ಧಿ ಸಂಘದ ಅದ್ಯಕ್ಷ ನಿರಂಜನ್ ಮಾತನಾಡಿ ವಿದ್ಯಾಭ್ಯಾಸದ ಜೊತೆಗೆ ವಿವಿಧ ಸಾಂಸ್ಕೃತಿಕ ಕಲೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಶಾಲಾ ಮಕ್ಕಳು ಪ್ರಗತಿ ಹೊಂದಬೇಕು ಎಂದರು.ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದ ಹೇಮಂತ್, ಎಂ. ಅಂಕಿತ್ ನಾಯಕ್, ಎನ್. ಒಂಕಾರ್ ಆಚಾರ್, ಸಮೀರ್ ಮತ್ತು ವಿಶಾಲ್ ಸೇರಿದಂತೆ ಆತ್ಮ ರಕ್ಷಣೆ ಮಾಡಿಕೊಳ್ಳುವಂತ ಕರಾಟೆಯ ವಿವಿಧ ಪ್ರಕಾರಗಳು ಮಾಡಿದರು. ಕರಾಟೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ದಿ ಕ್ರೇಸೆಂಟ್ ಶಾಲೆಯ ತಮೀಮ್ ಪಾಷ ಅನ್ಸಾರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಜಿಲ್ಲಾದ್ಯಕ್ಷ ಎಸ್.ವಿ ನಾಗರಾಜರಾವ್, ರಾಜ್ಯಮಟ್ಟದ ಕ್ರೀಡಾಪಟು ಜಯಂತಿ ಗ್ರಾಮ ನಾರಾಯಣಸ್ವಾಮಿ, ಮುನಿರಾಜು, ಕರಾಟೆ ತರಬೇತುದಾರಾದ ಜಭಿವುಲ್ಲಾ, ಚಂದ್ರು, ಚುಟುಕು ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಶಿವಣ್ಣ ಗೌರವಾದ್ಯಕ್ಷ ಟಿ.ಟಿ ನರಸಿಂಹಪ್ಪ, ಆರ್. ಸುಂದರಾಚಾರಿ ಹಾಗೂ ಮುಂತಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here