ಸಭಾಪತಿ ಪದಚ್ಯುತಿಗೆ ಯಾವ ಪಕ್ಷದ ನಾಯಕರು ನನ್ನನ್ನ ಸಂಪರ್ಕಿಸಿಲ್ಲ,

0
156

ವಿಧಾನಪರಿಷತ್ ಸಭಾಪತಿ ಪದಚ್ಯುತಿಗೆ ಯಾವ ಪಕ್ಷದ ನಾಯಕರು ನನ್ನನ್ನ ಸಂಪರ್ಕಿಸಿಲ್ಲ, ಎಚ್.ಡಿ.ಕುಮಾರಸ್ವಾಮಿ..

ಬಾಗಲಕೋಟೆ: ವಿಧಾನ ಪರಿಷತ್ ಸಭಾಪತಿ ಯವರನ್ನಪದಚ್ಯುತಿಗೊಳಿಸುವುದಾಗಲಿ,
ಮುಂದುವರೆಸುವದಕ್ಕಾಗಲಿ ಯಾವುದೇ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿಲ್ಲ, ಒಂದೊಮ್ಮೆ ಸಂಪರ್ಕಿಸಿದ್ದೇ ಅದಲ್ಲಿ ನಮ್ಮ ಪಕ್ಷದ ಶಾಸಕರೊಂದಿಗೆ ಚರ್ಚಿಸಿ ನಿರ್ಧರಿಸ ಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ರು. ಅವರು ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಪಾಲ್ಗೊಂಡು ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದ್ರು. ಸಭಾಪತಿ ನೇಮಕದ ವಿಚಾರವಾಗಿ ಯಾರೂ ನನ್ನನ್ನ ಸಂಪರ್ಕಿಸಿಲ್ಲ, ಆದ್ರೆ ಆ ವಿಷಯ ನನಗೂ ಗೊತ್ತಾಗಿದೆ, ಹೀಗಿರುವಾಗ ಯಾವ ಪಕ್ಷದವರೂ ಇಲ್ಲಿಯವರೆಗೂ ಸಂಪರ್ಕಿಸಿಲ್ಲ, ಸಂಪರ್ಕಿಸಿದ ಬಳಿಕ ನಮ್ಮ ನಾಯಕರೊಂದಿಗೆ ಕುಳಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ರು. ಇದೇ ವೇಳೆ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳು ನಿರಾಳರಾಗಿ ಕೆಲ್ಸ ಮಾಡಲಾಗುತ್ತಿಲ್ಲ, ಅವರನ್ನ ಪ್ರಾಮಾಣಿಕರಾಗಿ ಕೆಲ್ಸ ಮಾಡಲು ಸರ್ಕಾರ ಬಿಡಬೇಕಿದೆ ಎಂದು ಹೇಳಿದ್ರು.

LEAVE A REPLY

Please enter your comment!
Please enter your name here