ಸಮಗ್ರ ಕೃಷಿ ಅಭಿಯಾನ

0
179

Eಮಂಡ್ಯ/ಮಳವಳ್ಳಿ: ಕೃಷಿ ಇಲಾಖೆ ಹಾಗೂ‌ಕೃಷಿ ಸಂಬಂಧಿತ ಇತರೆ ಇಲಾಖೆ ಸಹಯೊಂದಿಗೆ ಸಮಗ್ರ ಕೃಷಿ ಅಭಿಯಾನ 2017 ರ ರಥ ಕಾಯ೯ಕ್ರಮದ ಚಾಲನೆ ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಮುಂಭಾಗ ನಡೆಯಿತು. ಕಾಯ೯ಕ್ರಮ ವನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್.ಎನ್ ವಿಶ್ವಾಸ್ ಚಾಲನೆ ನೀಡಿ ಮಾತನಾಡಿ, ಬರಗಾಲವಿದ್ದರೂ ಇಲಾಖೆಯಿಂದ ಮಾಹಿತಿ ನೀಡಲು ಮುಂದಾಗಿದ್ದು. ಬೆಳೆವಿಮೆ ಬಗ್ಗೆ ರೈತರಿಗೆ ಮಾಹಿತಿ ನೀಡುವ ಜೊತೆಗೆ ಹನಿನೀರಾವರಿ ಪದ್ದತಿ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು ಇದೇ ಸಂದರ್ಭದಲ್ಲಿ ಕೃಷಿಇಲಾಖೆ ಅಧಿಕಾರಿ ಪರಮೇಶ್ ಮಾತನಾಡಿ ಕಾಯ೯ಕ್ರಮ ದ ಬಗ್ಗೆ ವಿವರಿಸಿದರು. ಕಾಯ೯ಕ್ರಮ ದಲ್ಲಿ ಜಿ.ಪಂ ಸದಸ್ಯೆ ಸುಷ್ಮಾ, ಸುಜಾತ, ತಾ.ಪಂ ಉಪಾಧ್ಯಕ್ಷ ಮಾಧು, ತಾ.ಪಂ ಸದಸ್ಯರಾದ ಸುಂದರೇಶ್.ನಾಗೇಶ. ರಾಜಣ್ಣ. ತಹಸೀಲ್ದಾರ್ ಸೇರಿದಂತೆ ಮತ್ತಿತ್ತರರು ಇದ್ದರು.

LEAVE A REPLY

Please enter your comment!
Please enter your name here