ಸಮಗ್ರ ನಗರಾಭಿವೃದ್ಧಿಗೆ 7,300 ಕೋಟಿ

0
215

ಬೆಂಗಳೂರು/ಮಹದೇವಪುರ: ಬಜೆಟ್ನಲ್ಲಿ ನಗರದ ಅಭಿವೃದ್ಧಿಗೆ ಮೀಸಲಿಟ್ಟಿರುವ 7,300ಕೋಟಿ ರೂಗಳ ಅನುದಾನವನ್ನು ಬಳಸಿ ಎಂಟು ತಿಂಗಳೊಳಗೆ ನಗರದ ಸಮಗ್ರ ಅಭಿವೃದ್ಧಿ ಮಾಡಲಾಗುವುದೆಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

ಕ್ಷೇತ್ರದ ದೊಡ್ಡನೆಕ್ಕುಂದಿಯಲ್ಲಿ ನೂತನವಾಗಿ ನಿರ್ಮಿಸಿರುವ ಮೇಲ್ಸೇತುವೆ ಲೋಕಾರ್ಪಣೆ ಮಾಡಿದ ಬಳಿಕ ಹೂಡಿ ಮತ್ತು ಹಗದೂರು ವಾರ್ಡಗಳಲ್ಲಿ ನಗರೋತ್ಥಾನ ಅನುದಾನದಡಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಅರವಿಂದ ಲಿಂಬಾವಳಿ ಮತ್ತು ಪಾಲಿಕೆ ಮೇಯರ್ ಜಿ.ಪದ್ಮಾವತಿಯವರೊಂದಿಗೆ ಶಂಕು ಸ್ಥಾಪನೆ ನೆರವೇರಿಸಿ ನಂತರ ಮಾತನಾಡಿದರು.

ನಗರದ ಅಭಿವೃದ್ದಿಗೆ ಬಜೆಟ್ನಲ್ಲಿ ಮೀಸಲಿಟ್ಟಿರುವ 7300 ಕೋಟಿ ರೂ.ಅನುದಾನದಲ್ಲಿ 8 ತಿಂಗಳೊಳಗೆ ಕೈಗೊಳ್ಳುವ ವಿವಿಧ ಅಭಿವೃದ್ದಿ ಕಾಮಗಾರಿಗಳು ನಗರಕ್ಕೆ ಹೊಸ ರೂಪ ನೀಡಲಿದೆ ಎಂದು ಹೇಳಿದರು.

ಐಟಿ ಬಿಟಿ ಕೇಂದ್ರಗಳು ಹೆಚ್ಚಿರುವ ಮಹದೇವಪುರ ಕ್ಷೇತ್ರಕ್ಕೆ ನಗರೋತ್ಥಾನ ಅನುದಾನದಲ್ಲಿ 210 ಕೋಟಿ ರೂ. ನೀಡಲಾಗಿದೆ. ಈ ಭಾಗದಲ್ಲಿ ಐಟಿ ಬಿಟಿ ಕೇಂದ್ರಗಳು ಮತ್ತು ಜನಸಂದಣಿ ಹೆಚ್ಚಿರುವುದರಿಂದ ಸಂಚಾರ ದಟ್ಟಾಣೆ ಎತ್ತೇಚ್ಚವಾಗಿದೆ ಇದಕ್ಕೆ ಮುಕ್ತಿ ಕಲ್ಪಿಸಲು ಹೊರವರ್ತುರಸ್ತೆ ದೊಡ್ಡನಕ್ಕುಂದಿ ಸಮೀಪ ಮೇಲ್ಸೇತುವೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಅಲ್ಲದೆ ಮಾರತ್ತಹಳ್ಳಿ ಮತ್ತು ವೈಟ್ಪೀಲ್ಡ್ ರಸ್ತೆಯಲ್ಲಿಯೂ ಸಹ ಸಿಗ್ನಲ್ ಮುಕ್ತಗೊಳಿಸುವ ರಸ್ತೆ ಅಭಿವೃದ್ದಿ ಸೇರಿದಂತೆ ಹೂಡಿ ವಾರ್ಡನ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಬೆಳ್ಳಂದೂರು ಕೆರೆ ವಿಚಾರದಲ್ಲಿ ನುರಿತ ತಜ್ಞರ ಸಮಿತಿರಚನೆ ಮಾಡಲಾಗಿದೆ, ಕೆರೆ ಪ್ರದೇಶದಲ್ಲಿ ಇರುವ ಕಾಖರ್ಾನೆಗಳು ಮತ್ತು ಅಪಾರ್ಟ್ ಮೆಂಟುಗಳಲ್ಲಿ ತ್ಯಾಜ್ಯ ನೀರು ಸಂಸ್ಕರಿಸದೆ ನೇರವಾಗಿ ಕೆರೆಗೆ ನೀರು ಹರಿಸುವವರ ವಿರುದ್ಧ ಮತ್ತು ಕೆರೆಗೆ ಹೆಚ್ಚು ಹಾನಿಕಾರಕವಾಗಬಲ್ಲ ಕಾರ್ಖಾನೆಗಳನ್ನು ಮುಚ್ಚುವ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ ಬೆಳ್ಳಂದೂರು ಕೆರೆಯ ನೈರ್ಮಲ್ಯದ ಸಲುವಾಗಿ ಹಲವು ಬಾರಿ ಹೋರಾಟ ನಡೆಸಿದ್ದೇವೆ, ಕೆರೆಗೆ ಬೆಂಕಿ ಬಿದ್ದಾಗಲೂ ಪರಿಹಾರ ಕ್ರಮಕೈಗೊಳ್ಳುವಲ್ಲಿ ಸರ್ಕಾರ ವಿಳಂಬ ಮಾಡಿದೆ, ಇಂದು ಎನ್ಜಿಟಿ ಆದೇಶ ನೀಡುವ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿದೆ. ಕೆರೆ ನೈರ್ಮಲ್ಯಕ್ಕೆ ಕಾಪಾಡಲು ಕ್ರಮಕೈಗೊಳ್ಳಬೇಕಾದ್ದು ಸಕರ್ಾರದ ಆದ್ಯ ಕರ್ತವ್ಯ ಎಂದರು.

ಬಿಬಿಎಂಪಿ, ಸರ್ಕಾರ, ಕೆರೆ ಅಭಿವೃದ್ಧಿ ಪ್ರಾಧಿಕಾರ ಈ ಮೂರು ಇಲಾಖೆಗಳು ಸೇರಿ ನಗರದ ಕೆರೆಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದರು.

ಮಹದೇವಪುರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿತ್ತು, ವತರ್ೂರು ಕೋಡಿ ಬಳಿ ಸಚಿವ ಕೆ.ಜೆ. ಜಾರ್ಜ್ ಆಗಮಿಸುತ್ತಿದಂತೆ ಕಾಂಗ್ರೆಸ್ ನಾಯಕರು ಪಟಾಕಿ ಸಿಡಿಸಿ ಉಂಟಾದ ಕಸವನ್ನು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ವಚ್ಚಗೊಳಿಸಿದರು.

ಪೂಜೆಯ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಪರ ಜೈಕಾರ ಕೂಗಿದ್ದು ಮಿತಿಮೀರಿತು ಈ ವೇಳೆ ಸಚಿವರ ಮತ್ತು ಶಾಸಕರು ಕಾರ್ಯಕರ್ತರನ್ನು ಜೈಕಾರ ಕೂಗದಂತೆ ಮನವಿ ಮಾಡಿದರು ಸಮಾಧಾನಗೊಳಲಿಲ್ಲ ಇದರಿಂದ ನಾಯಕರು ಮುಜಗರಕ್ಕೊಳಗಾಗಿ ತರಾತುರಿಯಲ್ಲಿ ಕಾಮಗಾರಿ ಪೂಜೆ ಸಲ್ಲಿಸಿ ನಿರ್ಗಮಿಸಿದರು.

ಕಾರ್ಯಕ್ರಮದಲ್ಲಿ ಎಂಎಲ್ಸಿ ರಿಜ್ವಾನ್ ಹರ್ಷದ್, ಕೆಪಿಸಿಸಿ ಕಾರ್ಯದರ್ಶಿಎ.ಸಿ.ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಉದಯ್ಕುಮಾರ್, ಎ.ಸಿ.ಹರಿಪ್ರಸಾದ್, ಎನ್.ರಮೇಶ್, ಎಸ್.ಮುನಿಸ್ವಾಮಿ, ಪುಷ್ಪ ಮಂಜುನಾಥ್, ಶ್ವೇತಾ ವಿಜಯ್ಕುಮಾರ್,  ಬಿಬಿಎಂಪಿ ಜಂಟಿ ಅಯುಕ್ತೆ ವಾಸಂತ ಿಅಮರ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂರೆಡ್ಡಿ,ಹೂಡಿ ವಿಜಯ್ ಕುಮಾರ್, ರಾಜಾರೆಡ್ಡಿ, ಮಹೇಂದ್ರಮೋದಿ, ಎಂಸಿಸಿ ರವಿ, ಚಂದ್ರಾರೆಡ್ಡಿ,  ಮತ್ತಿತರರಿದ್ದರು.

LEAVE A REPLY

Please enter your comment!
Please enter your name here