ಸಮಸ್ಯೆಗಳ ಸರಮಾಲೆ ಈ ಸರ್ಕಾರಿ ಶಾಲೆ

0
186

ಬೆಂಗಳೂರು(ಚಾಮರಾಜಪೇಟೆ) : ಬೆಂಗಳೂರು ಮಹಾನಗರ ಹೃದಯಭಾಗದಲ್ಲಿರುವ ಶಾಲೆಯ ದುಸ್ಥಿತಿಯ  ಬಗ್ಗೆ ನಿಮಗೆ ಹೇಳಲೇ ಬೇಕು. ವಾರ್ಡ್ ನಂ, 137 ರಾಯಪುರ, ಕೆ.ಪಿ.ಅಗ್ರಹಾರ ಬಿನ್ನಿಮಿಲ್ಲು ಕಾಲೋನಿಯಲ್ಲಿ ನ ಕಾರ್ಮಿಕರ ಮಕ್ಕಳಿಗಾಗಿ 1971 ಇಸವಿಯಲ್ಲಿ ಸ್ಥಾಪಿಸಿರುವ ಬಿನ್ನಿಮಿಲ್ಲು ಕನ್ನಡ ಶಾಲೆಯ ಸ್ಥಿತಿ ಚಿಂತಾಜನಕವಾಗಿದೆ. ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಇಲ್ಲಿ ಕಲಿಯಲು ಬರುವ ಕೂಲಿ ಕಾರ್ಮಿಕರ ಮಕ್ಕಳು ಜೀವ ಕೈಯಲ್ಲಿ ಹಿಡಿದು ಪಾಠ ಕಲಿಯುವಂತಾಗಿದೆ. ಮುರುಕಲು ಸ್ಥಿತಿಯಲ್ಲಿರುವ ಮಳೆಬಂದು ಸೋರುವ ಮೇಲ್ಚಾವಣಿ ಒಂದೆಡೆ ಯಾದರೆ, ವಿದ್ಯಾರ್ಥಿಗಳಿಗೆ ಕುಳಿತು ಪಾಠ ಕೇಳಲು ಸೂಕ್ತ ಆಸನದ ವ್ಯವಸ್ಥೆ ಇಲ್ಲ,ಕುಡಿಯಲು ನೀರಿಲ್ಲಾ ಶೌಚಾಲಯದ ವ್ಯವಸ್ಥೆ ಕೇಳುವಂತಿಲ್ಲ ಸಂಪೂರ್ಣ ಬಯಲು ಶೌಚವೆ. ಇಷ್ಟೆಲ್ಲಾ ಸಮಸ್ಯೆಗಳು ಕಣ್ಣೆದುರೇ ಇದ್ದರೂ ಜಾಣಕುರುಡು ಪ್ರದರ್ಶಿತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ನಾಚಿಕೆಯಾಗಬೇಕು. ಶಾಲೆಯಲ್ಲಿ 100ಜನ ವಿದ್ಯಾರ್ಥಿಗಳಿಗೆ    ಗುತ್ತಿಗೆ ಆದಾರಿತ ಶಿಕ್ಷಕರು ಇಬ್ಬರು, ಸರ್ಕಾರಿ ಶಿಕ್ಷರು ನಾಲ್ಕುಜನ ಇದ್ದರು.ಪಾಠಪ್ರವಚನಗಳಿಗೆ ಅಡ್ಡಿಯಿಲ್ಲ ಆದರೆ ಶಾಲೆಗೆ ಮತ್ತು ವಿದ್ಯಾರ್ಥಿಗಳಿಗೆ ಅವಶ್ಯಕತೆಗನನುಗುಣವಾಗಿ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದೇ ಇದ್ದರೇ ವಿದ್ಯಾರ್ಥಿಗಳ ಮುಂದಿನ ಭವಿಷ್ಯವೇನು. ನಮ್ಮೂರು ಶಾಲೆಯ ದುಸ್ಥಿತಿ ಇದೆಂದು “ನಮ್ಮೂರು ಟಿವಿ” ಮಾದ್ಯಮದ ಮುಂದೆ ಹೇಳಿಕೆ ನೀಡುವ ವಿದ್ಯಾರ್ಥಿಗಳ ಸ್ಥಿತಿಗತಿಗಳತ್ತ ಸಂಬಂಧ ಪಟ್ಟ ಅಧಿಕಾರಿಗಳು ಇನ್ನಾದರೂ ಗಮನಹರಿಸಿ.ಸೌಕರ್ಯಗಳನ್ನು ಒದಗಿಸಿವಿರೆಂಬ ಮಹದಾಸೆ ನಮ್ಮದು.

LEAVE A REPLY

Please enter your comment!
Please enter your name here