ಸಮುದಾಯ ಭವನದ ಕಾಮಗಾರಿಗೆ ಚಾಲನೆ..

0
204

ಬಳ್ಳಾರಿ/ಹೊಸಪೇಟೆ:ಪ್ರತಿ ಗ್ರಾಮದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಸಮುದಾಯ ಭವನಗಳಿರಬೇಕೆನ್ನುವ ಉದ್ದೇಶದಿಂದ ಶಾಸಕ ಆನಂದ್ ಸಿಂಗ್ ತಮ್ಮ ಅನುದಾನಲ್ಲಿ ಹೆಚ್ಚು ಹೆಚ್ಚು ಸಮುದಾಯ ಭವನ‌ ನಿರ್ಮಾಣ ಮಾಡಲು ಮುಂದಾಗುತ್ತಿದ್ದಾರೆ.
ಇದರ ಭಾಗವಾಗಿ ಮಂಗಳವಾರ
2016-17ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಇಂಗಳಿಗಿ ಗ್ರಾಮದಲ್ಲಿ ಸಮುದಾಯ ಭವನ ಕಾಮಗಾರಿಗೆ ಮಾಜಿ ಶಾಸಕರಾದ ರತನಸಿಂಗ್
ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು ಕೃಷಿಕರೇ ಹೆಚ್ಚಾಗಿರುವ ಹೊಸಪೇಟೆ ಕ್ಷೇತ್ರದಲ್ಲಿ ಈ ರೀತಿಯ ಸಮುದಾಯ ಭವನಗಳು ಜನರಿಗೆ ಸಾಕಷ್ಟು ಉಪಯುಕ್ತವಾಗಲಿವೆ. ಇವುಗಳ ಸದ್ಭಳಕೆಯಾಗಬೇಕೆಂದರು
ಮತ್ತೊಂದೆಡೆ ಬೈಲುವದ್ದಿಗೇರಿಯಲ್ಲಿ ಧರ್ಮೇಂದ್ರ ಸಿಂಗ್ ನಬಾರ್ಡ್ ಗ್ರಾಮೀಣ ಯೋಜನೆಯಡಿ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ಚಾಲನೆ ನೀಡಿದರು.
ಈ ವೇಳೆ ಗ್ರಾಮದ ನಾಗೇಂದ್ರಪ್ಪ ,ಇಂಗಳಿಗಿ ನಟರಾಜ, ಉದ್ದೇದಪ್ಪ , ಪಂಚಪ್ಪ , ಹೂನ್ನೊರಪ್ಪ , ಸಿದ್ದಪ್ಪ , ಮಹಾಂತರೆಡ್ಡಿ, ಭರ್ಮಪ್ಪ , ಇತರರು ಇದ್ದರು..

LEAVE A REPLY

Please enter your comment!
Please enter your name here