ಸಮುದ್ರದ ಉಪ್ಪುನೀರು ಸಿಹಿನೀರು ಅಗಲಿದೆ….

0
255

ಬಳ್ಳಾರಿ /ಹೊಸಪೇಟೆ:ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಿ ಜನರಿಗೆ ಕುಡಿಯುವ ನೀರನ್ನು ನೀಡುವಂತಹ ಮಹತ್ವದ ಯೋಜನೆಯ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ದಿ ಸಚಿವ ಆರ್. ರೋಷನ್ ಬೇಗ್ ಹೇಳಿದರು.

ನಗರದ ಖಾಸಗಿ ಹೋಟಲ್‌ನಲ್ಲಿ ಗುರುವಾರ ಸಂಜೆ ನಗರಸಭೆ ಮತ್ತು ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿಘಳ ಸಭೆ ಬಳಿಕ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈಗಾಗಲೇ ತಮಿಳುನಾಡಿನಲ್ಲಿ ಸಮದ್ರದ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸಿ ಅಲ್ಲಿನ ಜನರಿಗೆ ಶುದ್ದವಾದ ಕುಡಿಯುವ ನೀರನ್ನು ಒದಗಿಸುತ್ತಿದ್ದಾರೆ. ತಮಿಳುನಾಡಿಗೆ ರಾಜ್ಯದ ಅಽಕಾರಿಗಳೊಂದಿಗೆ ತೆರಳಿ ಸಮುದ್ರದ ನೀರನ್ನು ಶುದ್ದವಾದ ಕುಡಿಯುವ ನೀರನ್ನಾಗಿ ಪರಿವರ್ತಿಸುವಂತಹ ಯೋಜನೆಯನ್ನು ನೋಡಿಕೊಂಡು ಬರಲಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಸಮದ್ರದ ಉಪ್ಪು ನೀರನ್ನು ಶುದ್ದ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಯೋಜನೆಯನ್ನು ೧೬೦೦ ಕೋಟಿ ರು.ಗಳ ಯೋಜನೆಯನ್ನು ಮೊದಲು ಮಂಗಳೂರಿನಲ್ಲಿ ಪ್ರಾರಂಭಿಸುವ ಚಿಂತನೆಯಲ್ಲಿದೆ. ಖಾಸಗಿ ಮತ್ತು ಸರ್ಕಾರದ ಸಹ ಭಾಗಿತ್ವದಲ್ಲಿ ಯೋಜನೆ ಆರಂಭಿಸುವಂತಹ ಆಲೋಚನೆಯಲ್ಲಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಲ್ಲಿ ದೊಡ್ಡ ಸಮದ್ರ ಇದೆ. ಸಮದ್ರದ ನೀರನ್ನು ಬಳಸಿಕೊಂಡು ಯಾಕೆ ರಾಜ್ಯದ ಜನರಿಗೆ ಶುದ್ದವಾದ ಕುಡಿಯುವ ನೀಡಬಾರದು ಎಂದು ಆಲೋಚಿಸಿ ಮಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಲೋಚಿಸಿ ತಮ್ಮ ಬಜೆಟ್‌ನಲ್ಲಿ ಸಮದ್ರದ ಉಪ್ಪು ನೀರನ್ನು ಶುದ್ದವಾದ ಕುಡಿಯುವ ನೀರನ್ನಾಗಿ ಪರಿವರ್ತಿಸಿ ಜನರಿಗೆ ನೀಡುವ ಭರವಸೆಯನ್ನು ನೀಡಿ ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಈಗ ಸಮದ್ರದ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ನೀಡುವಂತಹ ಮಹತ್ವದ ಯೋಜನೆಯನ್ನು ಸಿದ್ದಪಡಿಸಿ ಆದಷ್ಟು ಬೇಗನೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.

ಜುಲೈ ೫ ರಂದು ಬಳ್ಳಾರಿ, ಹೊಸಪೇಟೆ ಹಾಗೂ ಗಂಗಾವತಿಗೆ ಭೇಟಿ ನೀಡಿ ಕುಡಿಯುವ ನೀರಿನ ಕುರಿತು ಮಾಹಿತಿ ಪಡೆಯಲಾಗುವುದು. ಜುಲೈ ೨೫ ರಂದು ಹೊಸಪೇಟೆಗೆ ಬಂದು ನಗರದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಪರಿಶೀಲನೆ ನಡೆಸಲಾಗುವುದು ಎಂದು ಅವರು ಹೇಳಿದರು.

ನಗರ ನೀರು ಸರಬರಾಜು ಮಂಡಳಿಯ ಮುಖ್ಯ ಅಭಿಯಂತರ ದಿನೇಶ್, ಬಳ್ಳಾರಿ ಮಹಾ ನಗರಪಾಲಿಕೆ ಆಯುಕ್ತ ಎಂ. ಕೆ. ನಲವಡಿ, ಹೊಸಪೇಟೆ ನಗರಸಭೆಯ ಅಽಕಾರಿ ಮನ್ಸೂರ್ ಅಹಮ್ಮದ್, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಗುರುಬಸವರಾಜ, ಬಳ್ಳಾರಿಯ ಮೇಯರ್ ವೆಂಕಟರಮಣ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜ್,  ಸೇರಿದಂತೆ ಜಿಲ್ಲೆಯ ಹಿರಿಯ ಅಽಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಗರಸಭಾ ಅಧ್ಯಕ್ಷ ಅಬ್ದುಲ್ ಖಧಿರ್, ನಗರಾಭಿವೃದ್ದಿ ಪ್ರಾಽಕಾರದ ಅಧ್ಯಕ್ಷ ವೆಂಕಟೇಶ್ ರೆಡ್ಡಿ, ಸ್ಥಳೀಯ ಮುಖಂಡರಾದ ಎಲ್. ಸಿದ್ದನಗೌಡ, ಅಯ್ಯಾಳಿ ತಿಮ್ಮಪ್ಪ, ಎಚ್. ಎನ್. ಎಫ್. ಇಮಾಮ್ ನಿಯಾಜಿ, ಕೆ. ಬಡಾವಲಿ, ನಿಂಬುಗಲ್ ರಾಮಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here