ಸರ್ಕಾರಿ ಜಮೀನು ಗುಳುಂ: ಗ್ರಾ.ಪಂ ಸದಸ್ಯನ ಸದಸ್ಯತ್ವ ರದ್ದು ಆದೇಶ

0
378
ಬಳ್ಳಾರಿ/ ಸಂಡೂರು: ಗ್ರಾಮ ಪಂಚಾಯ್ತಿ ರಿಜಿಸ್ಟರ್‌ನಲ್ಲಿ ಅಕ್ರಮ ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ ಹಿನ್ನೆಲೆ ಸಂಡೂರು ತಾಲೂಕಿನ ಕೃಷ್ಣಾನಗರ ಗ್ರಾಮ ಪಂಚಾಯ್ತಿ ಸದಸ್ಯ ಬಾವಸಾಬ್ ಡಿ.ಎಫ್ ಅವರ ಸದಸ್ಯತ್ವವನ್ನು ರದ್ದುಪಡಿಸಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ ಆದೇಶ ಹೊರಡಿಸಿದೆ.
[ಬಾವಸಾಬ್ ಏಂಬವರು ಈ ಹಿಂದೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನಾಗಿದ್ದ. ಅಧ್ಯಕ್ಷರಾಗಿ ಹುಸೇನ್ ಬೀ ಇದ್ದಾಗ ಕೃಷ್ಣಾನಗರ ಗ್ರಾಮದ (65.75 ಎಕರೆ) ಸರ್ಕಾರಿ ಜಮೀನಿಗೆ ಪಂಚಾಯ್ತಿಯ ಅಸಿಸ್ಟೆಂಟ್‌ ರಿಜಿಸ್ಟರ್‌ನಲ್ಲಿ ಫಕುಮಾ ಬೀ ಮತ್ತು ಕೆ. ಶೇಕನ್ ಬೀ ಹೆಸರನ್ನು ಸೇರಿಸಿ ಸರ್ಕಾರಿ ಜಮೀನು ಮಾರಾಟಕ್ಕೆ ಮುಂದಾಗಿದ್ದರು.
ಇದನ್ನು ದೌಲತ್‌ಪುರದ ಶ್ರೀಪಾದ ಸ್ವಾಮಿ ಏಂಬ ವ್ಯಕ್ತಿ ಪತ್ತೆಹಚ್ಚಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ತನಿಖೆ ನಡೆಸಿ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿತ್ತು. ಅಂದಿನ ಅಧ್ಯಕ್ಷರು ಮತ್ತು ಕಾರ್ಯದರ್ಶಿ ರುದ್ರಪ್ಪನ ಮೇಲೆ ಕ್ರಿಮಿನಲ್ ಕೇಸು ದಾಖಲಾಗಿತ್ತು.

ಆದರೆ, ಈಗಲೂ ಗ್ರಾ.ಪಂ. ಸದಸ್ಯನಾಗಿದ್ದ ಮತ್ತು ತಮ್ಮ ತಾಯಿ ಫಾತಿಮಾ ಬೀ ಹೆಸರು ಸೇರಿಸಿ, ನಂತರ ಆ ಮಹಿಳೆ ಮಗ ಸುಭಾನ್ ಹೆಸರಿಗೆ ಗಿಫ್ಟ್ ಡೀಡ್ ಮಾಡಿ ಜಮೀನು ಕಬಳಿಸಿದ್ದ. ಇದು ಸಾಬೀತಾಗಿರುವ ಹಿನ್ನೆಲೆ ಬಾವಸಾಬ್ ಅವರ ಸದಸ್ಯತ್ವವನ್ನು ರದ್ದು ಮಾಡಲಾಗಿದೆ ಎಂದು ಅಧೀನ ಕಾರ್ಯದರ್ಶಿ ಟಿ.ವಿ.ಅರುಣ್ ಕುಮಾರ್ ಆದೇಶ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here