ಸರ್ಕಾರಿ ನೌಕರ ಸಾವು,ಪರಿಹಾರ ಚೆಕ್ ವಿತರಣೆ.

0
226

ಬಳ್ಳಾರಿ/ಬಳ್ಳಾರಿ:ಹಂಪಿ ಉತ್ಸವದ ವೇಳೆ ಕರ್ತವ್ಯದ ಸಂದರ್ಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಕೊಪ್ಪಳದ ವಾರ್ತಾ ಇಲಾಖೆಯ ವಾಹನ ಚಾಲಕ ಎನ್.ವೆಂಕಟೇಶಲು ಅವರ ಕುಟುಂಬಕ್ಕೆ 5ಲಕ್ಷ ರೂ.ಪರಿಹಾರ ಮೊತ್ತವನ್ನು ಬಳ್ಳಾರಿ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಕೊಪ್ಪಳದ ವೆಂಕಟೇಶಲು ಅವರ‌ ನಿವಾಸಕ್ಕೆ ಸೋಮವಾರ ಸಂಜೆ ತೆರಳಿ ವಿತರಿಸಿದರು.

ವೆಂಕಟೇಶಲು ಅವರು ವಾರ್ತಾ ಇಲಾಖೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದ ಡಿಸಿ ರಾಮ್ ಪ್ರಸಾತ್ ಅವರು ಅವರ ಕುಟುಂಬದ ಒಬ್ಬರಿಗೆ ಶೀಘ್ರ ಕಾನೂನು ಪ್ರಕಾರ ಏನೆಲ್ಲಾ ಸೌಲಭ್ಯಗಳನ್ನು ಸಿಗಬೇಕೋ ಅವುಗಳನ್ನು ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಹಂಪಿ ಉತ್ಸವ ಸಮಿತಿ ವತಿಯಿಂದ ಹಾಗೂ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಸೂಚನೆ ಮೇರೆಗೆ ಕುಟುಂಬಕ್ಕೆ ಪರಿಹಾರ ಒದಗಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಮಲಿಂಗಪ್ಪ ಬಿ.ಕೆ, ಕೊಪ್ಪಳದ ವಾರ್ತಾಧಿಕಾರಿ ತುಕಾರಾಂ, ತಹಸೀಲ್ದಾರ್ ಗುರುಬಸವಯ್ಯ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here