ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯಲು ಮುಂದಾದ ಅಧಿಕಾರಿಗಳು..

0
329

ಬೆಂಗಳೂರು/ಮಹದೇವಪುರ; ಬೆಂಗಳೂರು ಪೂರ್ವ ತಾಲೂಕಿನ ದೊಡ್ಡನೆಕ್ಕುಂದಿ ಗ್ರಾಮದಲ್ಲಿ ಸರ್ವೆ ನಂಬರ್ 15 ರಲ್ಲಿ ಸರ್ಕಾರಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಲು ಕೃಷ್ಣರಾಜಪುರ ತಾಲೂಕು ಆಡಳಿತ ಮಂಡಳಿ ಮುಂದಾದ ವೇಳೆ ಅಧಿಕಾರಿಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾವಾಗಿತ್ತು. ಅಧಿಕಾರಿಗಳು ವಶಪಡಿಸಿಕೊಳ್ಳಲು ಮುಂದಾದ ಸರ್ಕಾರಿ ಭೂಮಿ ಮದ್ಯಭಾಗದಲ್ಲಿ ಖಾಸಗಿ ವ್ಯಕ್ತಿಗಳಿಗೆ ಸೇರಿದ 2 ಎಕರೆ ಭೂಮಿ ಇದ್ದು ಮಾಲಿಕರು ಬಾಡಿಗೆ ಮನೆಗಳನ್ನು ನಿರ್ಮಿಸಿದರು. ಈ ಜಾಗಕ್ಕೆ ಸಂಬಂದಿಸಿದಂತೆ ಹಲವು ವರ್ಷಗಳಿಂದ ಹೈಕೋರ್ಟ್ ನಲ್ಲಿ ಕೇಸ್ ನಡೇಯುತ್ತಿದ್ದರು ಇಂದು ಕೆ.ಆರ್.ಪುರ ತಹಶಿಲ್ದಾರ್ ನೇತೃತ್ವದ ತಂದ ಏಕಾಏಕಿ ಸ್ಥಳಕ್ಕೆ ಬಂದು ಸ್ಥಳದಲ್ಲಿನ ಬಾಡಿಗೆ ಮನೆಗಳನ್ನು ಜೆಸಿಬಿಗಳಿಂದ ನೆಲಸಮ ಗೊಳಿಸಲು ಮುಂದಾದ ವೇಳೆ ಬಾಡಿಗೆ ದಾರರು ಕಂಗಾಲಾಗಿದ್ದಾರೆ. ಇದಕ್ಕು ಮುನ್ನ ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸುವ ಬಗ್ಗೆ ಜಮೀನು ಮಾಲಿಕರು ಹಾಗೂ ಬಾಡಿಗೆ ಮನೆಗಳಲ್ಲಿ ನೆಲಸಿರುವವರಿಗೆ ಯಾವುದೆ ಮಾಹಿತಿ ನೀಡದೆ ಇರುವುದರಿಂದ ತೆರವುಗೊಳಿಸಿದ ಮನೆಗಳ ನಿವಾಸಿಗಳು ಬಿದಿ ಪಾಲಾದಂತಾಗಿದ್ದು, ಉಳಿದವರು ಕಂಗಾಲಾಗಿದ್ದು ಅಧಿಕಾರಿಗಳ ಕ್ರಮದ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಟ್: ಬಾಬು ರೆಡ್ಡಿ, ಜಮೀನು ಮಾಲಿಕರು.

ಬೈಟ್: ಲಿಂಗರಾಜು, ಬಾಡಿಗೆದಾರ.

LEAVE A REPLY

Please enter your comment!
Please enter your name here