ಸರ್ಕಾರ ಯಾವುದೇ ಬಂದ್ರು ಮುಧೋಳ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಫಿಕ್ಸ್..

0
253

ಬಾಗಲಕೋಟೆ: ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಯಾದ್ರೆ ಸಾಕು ಆಯಾ ಕ್ಷೇತ್ರದ ಶಾಸಕರು, ಅವರ ಬೆಂಬಲಿಗರು ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬರೋ ಸರ್ಕಾರದಲ್ಲಿ ಸಚಿವ ಸಂಪುಟ ಸೇರ್ಪಡೆಗೆ ಕಸರತ್ತು ನಡೆಸಿದು ಕಾಮನ್ ಆದ್ರೆ ಇಲ್ಲೊಂದು ಕ್ಷೇತ್ರವಿದೆ, ಈ ಕ್ಷೇತ್ರದಲ್ಲಿ ಯಾರೇ ಆಯ್ಕೆಯಾಗಿ ಬಂದ್ರೂ ಅವರಿಗೆ ಮಂತ್ರಿಗಿರಿ ಮಾತ್ರ ತಪ್ಪೋದಿಲ್ಲ. ಹೌದು. ರಾಜ್ಯದಲ್ಲಿ ಇಂತಹವೊಂದು ಅಪರೂಪದ ವಿಧಾನಸಭಾ ಮತಕ್ಷೇತ್ರ ಎಂದು ಹೆಸರಾಗಿರೋದು ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನ ಸಭಾ ಮತಕ್ಷೇತ್ರ. ಮೀಸಲು ವಿಧಾನಸಭಾ ಮತಕ್ಷೇತ್ರವಾಗಿರೋ ಮುಧೋಳಕ್ಕೆ ಕಳೆದ 2 ದಶಕಗಳ ಅಂದ್ರೆ ಬರೋಬ್ಬರಿ 23 ವರ್ಷಗಳ ಇತಿಹಾಸದಲ್ಲಿ ಈ ಕ್ಷೇತ್ರದ ಜನಪ್ರತಿನಿಧಿಗಳಿಗೆ ಆಯಾ ಸರ್ಕಾರದಲ್ಲಿ ಮಂತ್ರಿಗಿರಿ ಭಾಗ್ಯ ಮಾತ್ರ ತಪ್ಪಿಲ್ಲ. ಬಿಜೆಪಿಯಿಂದ ಗೋವಿಂದ ಕಾರಜೋಳ ಸಚಿವರಾಗುತ್ತ ಬಂದಿದ್ದರೆ, ಇತ್ತ ಕಾಂಗ್ರೆಸ್ನಿಂದ ಆರ್.ಬಿ.ತಿಮ್ಮಾಪೂರ ಮಂತ್ರಿಭಾಗ್ಯ ಅನುಭವಿಸುತ್ತಲೇ ಬಂದಿದ್ದಾರೆ. ಮೊದ್ಲು ತಿಮ್ಮಾಪೂರ ಮಂತ್ರಿಯಾಗಿದ್ದರೆ ನಂತ್ರ ಕಳೆದ 2 ಅವಧಿಗೆ ಕಾರಜೋಳ ಆಯ್ಕೆಯಾಗಿ ಮಂತ್ರಿಯಾಗಿದ್ದರೆ ಈ ಬಾರಿ ಕಾರಜೋಳ ಆಯ್ಕೆಯಾಗಿದ್ದರೂ ಸರ್ಕಾರ ಕಾಂಗ್ರೆಸ್ ಆಗಿದ್ದರಿಂದ ಮಂತ್ರಿ ಪದವಿ ತಪ್ಪಿತ್ತು, ಆದ್ರೆ ಮರಳಿ ಆರ್.ಬಿ.ತಿಮ್ಮಾಪೂರ ವಿಧಾನಪರಿಷತ್ಗೆ ಆಯ್ಕೆಯಾಗಿ ಮತ್ತೇ ಸಿದ್ದರಾಮಯ್ಯನವರ ಸಂಪುಟಕ್ಕೆ ಸೇರ್ಪಡೆಯಾಗಿದ್ದರಿಂದ ಮುಧೋಳದ ಇತಿಹಾಸ ಮುಂದುವರೆದಂತಾಗಿದೆ.

ಇನ್ನು ಈ ಬಾರಿ ಮುಧೋಳದ ಇತಿಹಾಸ ಮರುಕಳಿಸಲಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಲೇ ಇದ್ದವು ಆದ್ರೆ ಇದೀಗ ಅದೃಷ್ಠ ಮತ್ತೆ ಖುಲಾಯಿಸಿದೆ. ಈ ಮಧ್ಯೆ 3 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೋವಿಂದ ಕಾರಜೋಳ ವಿರುದ್ಧ ಆರ್.ಬಿ. ತಿಮ್ಮಾಪೂರ ಸೋಲನ್ನು ಅನುಭವಿಸಿದ್ರು ಸಹ ಕಾಂಗ್ರೆಸ್ ಪಕ್ಷವನ್ನ ಮಾತ್ರ ಮರೆತಿರಲಿಲ್ಲ. ಈ ಮಧ್ಯೆ ಸಿದ್ದರಾಮಯ್ಯನವರ ಕೃಪಾಕಟಾಕ್ಷದಿಂದ 3 ಬಾರಿ ಸೋತಿದ್ದ ತಿಮ್ಮಾಪೂರ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ನಿಂದ ಗೆದ್ದು ಬಂದಿದ್ದರು. ಇವುಗಳ ಮಧ್ಯೆ ಸಿದ್ದರಾಮಯ್ಯನವರು 6ನೇ ಬಾರಿ ಸಂಪುಟ ವಿಸ್ತರಣೆ ಮಾಡೋ ವೇಳೆ ದಲಿತ ಕೋಟಾದಡಿ ಮತ್ತೇ ತಿಮ್ಮಾಪೂರ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದ್ದು, ಇದ್ರಿಂದ ಮುಧೋಳ ಮತಕ್ಷೇತ್ರಕ್ಕೆ ಮರಳಿ ಮಂತ್ರಿಭಾಗ್ಯ ಒಲಿದು ಬಂದಂತಾಗಿದೆ. ರಾಜ್ಯದಲ್ಲಿ ಅಪರೂಪದ ರಾಜಕೀಯ ಇತಿಹಾಸ ಹೊಂದಿದ್ದ ಮುಧೋಳ ಮತಕ್ಷೇತ್ರದಲ್ಲಿ ಇದೀಗ ಮತ್ತೇ ತಿಮ್ಮಾಪೂರ ಅವರು ಸಚಿವ ಸ್ಥಾನ ಅಲಂಕರಿಸುವ ಮೂಲಕ ಮುಧೋಳ ಕ್ಷೇತ್ರ ಹಿಂದಿನ ಇತಿಹಾಸ ಮುಂದುವರೆಸಿಕೊಂಡು ಬಂದಿದ್ದು ಇಲ್ಲಿನ ಜನ್ರು ಮಾತ್ರ ನಾವೇ ಅದೃಷ್ಠವಂತರೂ ಎನ್ನುವಂತಾಗಿದ್ದಂತು ಸುಳ್ಳಲ್ಲ..

LEAVE A REPLY

Please enter your comment!
Please enter your name here