ಸರ್ವತೋಮುಖ ಅಭಿವೃದ್ದಿಗಾಗಿ ಟಾಸ್ಕ್ ಫೋರ್ಸ್.

0
107

ಬೆಂಗಳೂರು/ಮಹದೇವಪುರ:- ಇದೇ ಮೊದಲ ಬಾರಿಗೆ ಕ್ಷೇತ್ರವೊಂದರ ಸರ್ವಾಂಗೀಣ ಅಭಿವೃದ್ದಿ ಮಾಡುವ ಸಲುವಾಗಿ ಸರ್ಕಾರಿ ಅಧಿಕಾರಿಗಳ ಜೊತೆಗೆ ನಾಗರೀಕರೂ ಒಳಗೊಂಡ ಟಾಸ್ಕ್ ಫೋರ್ಸ್ ಒಂದು ಮಹದೇವಪುರ ಕ್ಷೇತ್ರದಲ್ಲಿ ಕಾರ್ಯಾರಂಭ ಮಾಡಿದ್ದು, ಬೆಳ್ಳಂಡೂರು ಸಮೀಪದ ಖಾಸಗಿ ಕಾಲೇಜಿನಲ್ಲಿ ಲೋಕಾರ್ಪಣೆ ಗೊಂಡಿದೆ.
‌ಮಹದೇವಪುರ ಕ್ಷೇತ್ರದಲ್ಲಿನ ಪರಿಸರ ಸಂರಕ್ಷಣೆ, ಸುರಕ್ಷತೆ, ಕಾನೂನು ಸುವ್ಯವಸ್ಥೆ, ಮೂಲಸೌಕರ್ಯಗಳು, ಪ್ರತಿಯೊಂದು ವಾರ್ಡ್ ನ ಕುಂದುಕೊರತೆಗಳು, ಒದಗಿಸಬೇಕಾದ ಸೌಲಭ್ಯಗಳು ಸೇರಿದಂತೆ, ಸಮಾಜದ ಸಮಸ್ಯೆಗಳನ್ನು ಬಗೆಹರಿಸಿ ಒಂದು ಪರಿಹಾರ ಕಂಡುಕೊಳ್ಳುವ ಸಲುವಾಗಿ ಕಾರ್ಯಪಡೆ ಯೋಜನೆಯನ್ನು ಮಾಡಲಾಗಿದೆ. ಆನ್ ಲೈನ್ ಮೂಲಕ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆಗಳ ಮಾಹಿತಿ ಪರಿಹಾರ ಒದಗಿಸುವುದು ಮುಂದಿನ ಅಭಿವೃದ್ದಿ ಯೋಜನೆಗಳ ಸಮಗ್ರ ಮಾಹಿತಿಗಳನ್ನು ಒದಗಿಸುವುದು ಕಾರ್ಯಪಡೆಯ ಪ್ರಮುಖ ಉದ್ದೇಶವಾಗಿದ್ದು, ಕಾರ್ಯಪಡೆಯಲ್ಲಿ 7 ವಿಭಾಗಳಿದ್ದು, ತನ್ನದೆಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. 2030 ವೇಳೆಗೆ ಮಹದೇವಪುರವನ್ನು ಮಾದರಿ ಕ್ಷೇತ್ರ ಮಾಡುವ ದೃಷ್ಟಿಯಿಂದ ಈ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ ಎಂದು ಶಾಸಕ ಅರವಿಂದ ಲಿಂಬಾಳಿ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕುಖ್ಯಾತಿಗಳಿಸಿರುವ ನಗರದ ಸಂಚಾರದ ದಟ್ಟಣೆಯನ್ನು ಮೊದಲು ನಿಯಂತ್ರಿಸಬೇಕಿದೆ, ಇದರಿಂದ ಹೆಚ್ಚಿನ ಪರಿಸರ ಮಾಲಿನ್ಯವೂ ಕೂಡಾ ಉಂಟಾಗುತ್ತಿದೆ. ಇವೆಲ್ಲಾ ಸಮಸ್ಯೆಗಳು ಒಂದಂಕ್ಕೊಂದು ಬೆಸೆದುಕೊಂಡಿದ್ದು, ಒಂದು ಸಮಸ್ಯೆಯನ್ನು ನಿಯಂತ್ರಿಸಿದರೇ ಮತ್ತೊಂದಕ್ಕೂ ನಿಯಂತ್ರ ಹೇರಬಹುದಾಗಿದೆ. ಸಂಚಾರದಟ್ಟಣೆಯ ವಿಚಾರಕ್ಕೆ ಬಂದರೆ ಶಿಸ್ತುಪಾಲನೆಯ ಚಾಲನೆ ಮಾಡಿದರೆ 90 ರಷ್ಟು ಸಂಚಾರದಟ್ಟಣೆಯನ್ನು ನಿಯಂತ್ರಿಸಬಹುದು, ಇದು ನಮ್ಮ ದೇಶದ ಸಮಸ್ಯೆ ಮಾತ್ರ ಅಲ್ಲ, ಪ್ರತಿಯೊಂದು ದೇಶದಲ್ಲೂ ಸಂಚಾರದಟ್ಟಣೆ ಸಮಸ್ಯೆ ಇದೆ. ಶಿಸ್ತುಬದ್ದವಾಗಿ ಚಾಲನೆ ಮಾಡುವುದರಿಂದ ಸಂಚಾರದಟ್ಟಣೆಯನ್ನು ನಿಯಂತ್ರಿಸಬಹುದಾಗಿದೆ.

ಬೈಟ್: ಕುಪೇಂದ್ರ ರೆಡ್ಡಿ, ರಾಜ್ಯಸಭಾ ಸದಸ್ಯರು

ಒಟ್ಟಾರೆ ಒಂದು ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ದಿಯತ್ತ ಮುನ್ನಡೆಯಲು ಸರ್ಕಾರಿ ಅಧಿಕಾರಿಗಳೊಂದಿಗೆ ನಾಗರೀಕರೂ ಕೂಡಾ ಕೈಜೋಡಿಸಿ ಕಾರ್ಯರೂಪಕ್ಕೆ ಬಂದಿರುವ ಟಾಸ್ಕ್ ಫೋರ್ಸ್ ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿ ಎಂಬುದೇ ನಮ್ಮ ಆಶಯ.

LEAVE A REPLY

Please enter your comment!
Please enter your name here