ಸರ್ವಾನುಮತ ದಿಂದ ನಗರಸಭಾ ಅಧ್ಯಕ್ಷರ ಪದಚ್ಯುತಿ

0
431

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ: ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷ ಬಿ. ಅಪ್ಸರ್ ಪಾಷ ಪದಚ್ಯುತಿಗೆ ಸರ್ವಾನುಮತ ದಿಂದ ಕೈ ಎತ್ತುವ ಮೂಲಕ 24 ಜನ ನಗರಸಭೆ ಸದಸ್ಯರು ನಿರ್ಣಯಿಸಿದ್ದಾರೆ‌.

ನಗರಸಭೆ ಅಧ್ಯಕ್ಷ ಅಪ್ಸರ್ ಪಾಷ ಅನುಪಸ್ಥಿತಿಯಲ್ಲಿ ಉಪಾದ್ಯಕ್ಷೆ ಪ್ರಭಾವತಿ ಸುರೇಶ್ ಅಧ್ಯೆಕ್ಷೆತೆಯಲ್ಲಿ ಸಭೆ
ಸರ್ವಾನುಮತದಿಂದ ತೀರ್ಮಾನಿಸಿದ ಬಳಿಕ ಸಾಮಾನ್ಯ ಸಭೆಯ ನಡಾವಳಿ ಪುಸ್ತಕದಲ್ಲಿ ಸದಸ್ಯರು ಸಹಿಗಳನ್ನು ಹಾಕಲಾಗಿದೆ.

ಅದ್ಯಕ್ಷರ ಗೈರು ಹಾಜರಿಯಲ್ಲಿ ಕುರ್ಚಿ ಒಂದು ಮೂಲೆಯಲ್ಲಿ ಅನಾಥವಾಗಿರುವ ಸ್ಥಿತಿಯಲ್ಲಿ ದೃಷ್ಯ ಕಂಡುಬಂತು,ನಗರಸಭೆ ಆಯುಕ್ತ ಸಭೆಯಲ್ಲಿ ಅದ್ಯಕ್ಷರ ಪರವಾಗಿ ಯಾರು ಇಲ್ಲವಲ್ಲ ಎಂದು ಹೇಳಿ ವಿರೋಧ ವಾಗಿ ಸದಸ್ಯರು ಕೈ ಎತ್ತಿದ ನಂತರ ಅವರ ಪರವಾಗಿ ಕೈ ಎತ್ತಿ ಎಂದಾಗ ಸದಸ್ಯರಲ್ಲಿ ಗೊಂದಲ ಸೃಷ್ಟಿಯಾಯಿತು.

 

ಇತ್ತೀಚಗೆ ಪೌರಕಾರ್ಮಿಕರೊಬ್ಬರು ನಿಧನರಾದ ಹಿನ್ನೆಲೆ ಅವರ ಆತ್ಮಕ್ಕೆ ಶಾಂತಿ ಕೋರಿದರು.
ಸಭೆಯ ನಡಾವಳಿಯನ್ನು ಪತ್ರಿಕಾ ವರದಿಗಾರರಂತೆ ನಾಮ ನಿರ್ದೇಶಕ ಸದಸ್ಯರೊಬ್ಬರು ತಮ್ಮ ಮೊಬೈಲ್ ನಿಂದ ವೀಡಿಯೊ ಮಾಡುತ್ತಿದ್ದ ದೃಷ್ಯ ಕಂಡು ಬಂತು
ಹಾಲಿ ಅದ್ಯಕ್ಷ ಸೇರಿದಂತೆ ಐದುಜನ ಸದಸ್ಯರ ಗೈರು ಹಾಜರಿಯಲ್ಲಿ ಉಳಿದ 24 ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದರು

ಅಧ್ಯಕ್ಷರ ಪದಚುತಿ ಸಭೆ ಯಶಸ್ವಿಯಾದ ಹಿನ್ನೆಲೆ ಎಲ್ಲಾ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು.ನಗರಸಭೆ ಹಾಗೂ ಸುತ್ತಮುತ್ತ ಯಾವುದೇ ರೀತಿಯ ಅಹಿತಕರ ಘಟನೆಯಾಗದಂತೆ ನಗರಠಾಣೆ ಎಸ್ಐ.ನವೀನ್ ಮತ್ತು ದಿಬ್ಬೂರಹಳ್ಳಿ ಠಾಣೆ ಎಸ್ಐ.ವಿಜಯರೆಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೊ ಬಸ್ತು ಮಾಡಲಾಗಿತ್ತು

LEAVE A REPLY

Please enter your comment!
Please enter your name here