ಸವಿತಾ ಸಮಾಜದ ವತಿಯಿಂದ ಪ್ರತಿಭಟನೆ..

0
186

ಬಳ್ಳಾರಿ/ಹೊಸಪೇಟೆ:ಮರಿಯಮ್ಮನಹಳ್ಳಿ ರಾಜ್ಯ ಸರ್ಕಾರದ ಆರೋಗ್ಯ ಸಚಿವ ರಮೇಶ್ ಕುಮಾರ್‍ರವರು ಸವಿತ ಸಮಾಜದ ವೃತ್ತಿಯ ಬಗ್ಗೆ ಅವಹೇಳನಕಾರಿ ಮಾತನಾಡಿರುವುದನ್ನು ಖಂಡಿಸಿ ಪಟ್ಟಣದ ಸವಿತಾ ಸಮಾಜ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿ ವಿಎ ನದಾಫ್‍ರಿಗೆ ಮನವಿ ನೀಡಿದರು. ಹಿಂದ್ ನಾಯಕ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವಸ್ಥಾನ ಪಡೆದಿರುವ ಸಚಿವ ರಮೇಶ್ ಕುಮಾರ್‍ರವರು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಅನ್ಯ ಜಾತಿ ವೃತ್ತಿಯ ಬಗ್ಗೆ ಕೇವಲವಾಗಿ ಉದಾಹರಣೆ ನೀಡುವುದು ಖಂಡನಅರ್ಹ. ವೈದ್ಯರನ್ನು ದೂಷಿಸುವ ಧಾವಂತದಲ್ಲಿ ವೈದ್ಯರು, ಕ್ಷೌರಿಕರು ಹಾಗೂ ಕಳ್ಳರಿಗಿಂತ ಕಡೆ ಎಂಬ ಪದ ಬಳಕೆಯಿಂದ ಇಂದು ಸವಿತಾ ಸಮಾಜದವರು ತಲೆ ತಗ್ಗಿಸುವಂತಾಗಿದೆ. ಕಳ್ಳರ ಜತೆಯಲ್ಲಿ ಕ್ಷೌರಿಕರ ಪದ ಬಳಕೆ ಎಷ್ಟರ ಮಟ್ಟಿಗೆ ಸರಿ. ರಾಜ್ಯ ಸರ್ಕಾರ ಅಹಿಂದ್ ಜಪ ಮಾಡುತ್ತಿದ್ದು, ಹಿಂದುಳಿದ ವರ್ಗಕ್ಕೆ ಸೇರಿದ ಸವಿತಾ ಸಮಾಜದ ವೃತ್ತಿಯನ್ನು ಕೇವಲವಾಗಿ ಕಾಣುವುದು ಸರಿಯಲ್ಲ.  ಯಾವುದನ್ನಾದರು ದೂಷಿಸುವಾಗ ಯೋಚನೆ ಮಾಡಿ ಮಾತನಾಡುವುದು ಒಳಿತು. ಇದನ್ನು ಸರಿಪಡಿಸಿಕೊಂಡು ನಡೆದರೆ ಸರಿ. ಅನಗತ್ಯವಾಗಿ ಸಮಾಜ ಹಾಗೂ ಸಮಾಜದ ವೃತ್ತಿ ಬಗ್ಗೆ ಮಾತನಾಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು  ಮನವಿಯಲ್ಲಿ ಎಚ್ಚರಿಸಿದ್ದಾರೆ. ಸವಿತಾ ಸಮಾಜದ ಅಧ್ಯಕ್ಷ ಕುಲ್ಮಾಲ್ ರಾಘವೇಂದ್ರ, ಕಾರ್ಯದರ್ಶಿ ಕೆ.ಬಿ.ರಾಘವೇಂದ್ರ, ತಾಲೂಕು ಪ್ರತಿನಿಧಿ ಸಿ.ಕೆ.ರಾಮುಡು, ಶ್ರೀಧರ್, ಎಚ್.ಕೆ.ಶೇಷಗಿರಿ, ಕೆ.ವಿನೋದ್, ಸೋಮು, ಶಂಕರ್, ಅಂಬರೇಶ್, ವೀರೇಶ್ ಇತರರಿದ್ದರು. 

LEAVE A REPLY

Please enter your comment!
Please enter your name here