ಸಹಿಸಂಗ್ರಹಿಸಿ ಚಳುವಳಿ…

0
56

ಮಂಡ್ಯ/ಮಳವಳ್ಳಿ: ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ, ಸಾಲ ಮನ್ನಾ , ವೃದ್ಧ ರೈತ ಕೂಲಿಕಾರರಿಗೆ ಮಾಸಿಕ ರೂ 5000 ಪಿಂಚಣಿಗಾಗಿ ಒತ್ತಾಯಿಸಿ ಸಹಿಸಂಗ್ರಹ ಚಳುವಳಿ ಕಾರ್ಯಕ್ರಮ ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು.
ಮಳವಳ್ಳಿ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ತಾಲ್ಲೂಕು ಅಧ್ಯಕ್ಷ ಎನ್ .ಎಲ್ ಭರತ್ ರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರ ಕೃಷಿ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಒಟ್ಟು ವೆಚ್ಚದ ಮೊತ್ತದ ಜೊತೆಗೆ ಶೇ50 ರಷ್ಟು ಲಾಭಾಂಶ ಸೇರಿಸಿ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ನೀಡಬೇಕು ಮತ್ತು ರೈತ ಕೂಲಿಕಾರರಿಗೆ ವೃದ್ದಾಪ್ಯದಲ್ಲಿ ಮಾಸಿಕ ರೂ 5000 ಪಿಂಚಣಿಯನ್ನು ನೀಡಬೇಕೆಂದು ಒತ್ತಾಯಿಸಿ ದೇಶದಾದ್ಯಂತ 10 ಕೋಟಿ ರಾಜ್ಯದೆಲ್ಲೆಡೆ 5 ಲಕ್ಷ ಸಹಿ ಸಂಗ್ರಹಿಸಿ ಕೇಂದ್ರ ಸರ್ಕಾರ ಪ್ರದಾನ ಮಂತ್ರಿ ನರೇಂದ್ರಮೋದಿರವರಿಗೆ ನಕಲು ಪತ್ರವನ್ನು ಸಲ್ಲಿಸಲಾಗುವುದು. ರೈತ , ಕೂಲಿಕಾರರ, ಕಾರ್ಮಿಕರ ದಲಿತರು ಹಾಗೂ ಆದಿವಾಸಿ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆ ಆಗಸ್ಟ್ 9 ರಂದು ಜೈಲ್ ಭರೋ ಹಾಗೂ ಸೆಪ್ಟೆಂಬರ್‌ 5 ರಂದು ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಲ್ಲದೆ ಮಂಡ್ಯ ಜಿಲ್ಲೆ ಸಿಲ್ಕ್ ಅಂಡ್ ಮಿಲ್ಕ್ ಗೆ ಹೆಸರುವಾಸಿ ಆದರೆ ಇತ್ತೀಚಿನ ದಿನಗಳಲ್ಲಿ ಬೆಲೆ ಕುಸಿತವಾಗಿ ರೈತರು ಕಂಗಾಲಾಗಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರಹೋರಾಟ ಮಾಡಬೇಕಾಗಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಜನವಾದಿ ಮಹಿಳೆ ಸಂಘಟನೆ ಜಿಲ್ಲಾಧ್ಯಕ್ಷೆ ದೇವಿ, ರಾಮಕೃಷ್ಣ, ಸಂಘದ ಕಾರ್ಯದರ್ಶಿ ಎನ್. ಲಿಂಗರಾಜಮೂರ್ತಿ, ದೊಡ್ಡಮರಿಗೌಡ ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here